ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಪೂರ್ವ ಸಂಚಾರ ಪೊಲೀಸ್ ಠಾಣೆ ಹಾಗೂ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಹಾಗೂ ಶಿವಮೊಗ್ಗದ ಆಶಾ ಜ್ಯೋತಿ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಸಂಚಾರ ವೃತ್ತ ಕಛೇರಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ರಕ್ತದಾನ ಶಿಬಿರವನ್ನು Blood donation camp ಭದ್ರಾವತಿ ಸಂಚಾರಿ ಠಾಣೆಯ ಹೆಡ್ ಕಾನ್ ಸ್ಟೇಬಲ್ ಹಾಲೇಶಪ್ಪನವರು ಆಯೋಜಿಸಿದ್ದರು. ಇದು ಹಾಲೇಶಪ್ಪನವರ ಆಯೋಜನೆಯ 17 ನೇ ರಕ್ತದಾನ ಶಿಬಿರವಾಗಿದೆ.
ಶಿಬಿರವನ್ನು ಶಿವಮೊಗ್ಗ ಸಂಚಾರಿ ವೃತ್ತದ ಸಿಪಿಐ ಶ್ರೀ ಸಂತೋಷ್ ಕುಮಾರ್ ಡಿ.ಕೆ. ರವರು ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು. ಪಿ.ಎಸ್.ಐ. ಗಳಾದ ಶಿವಣ್ಣನವರ್, ನವೀನ್ ಮಠಪತಿ ಹಾಗೂ ತಿರುಮಲೇಶ್ ರವರು ಹಾಜರಿದ್ದರು.
Also read: ಮುಂಬೈ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಜಿಲ್ಲೆಯ ಇಬ್ಬರಿಗೆ ಪದಕ
ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಅವರ ಕುಟಂಬದವರು ಹಾಗೂ ಸಾರ್ವಜನಿಕರು ಸೇರಿದಂತೆ ಹಲವರು ರಕ್ತದಾನ ಮಾಡಿದರು. ಅಂತಿಮವಾಗಿ 25 ಯೂನಿಟ್ ಗಳಷ್ಟು ರಕ್ತ ಸಂಗ್ರಹವಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post