ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಅವರು ಈಗಾಗಲೇ ತಿಳಿಸಿದಂತೆಯೇ ಶಿವಮೊಗ್ಗ-ಚೆನ್ನೈ ನಡುವಿನ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್ ರೈಲು #Shivamogga-Chennai superfast Train ಸಂಚಾರ ಇಂದಿನಿಂದ ಆರಂಭಗೊಳ್ಳಲಿದೆ.
ಆಂಧ್ರಪ್ರದೇಶದ ಪುಟ್ಟಪರ್ತಿ(ಶ್ರೀಸತ್ಯಸಾಯಿ ಪ್ರಶಾಂತಿ ನಿಲಯಂ) ಹಾಗೂ ಚೆನ್ನೈ ನಡುವೆ ಸಂಚರಿಸುತ್ತಿದ್ದ ರೈಲನ್ನು ಶಿವಮೊಗ್ಗ-ಚೆನ್ನೈ ನಡುವಿನ ಮಾರ್ಗಕ್ಕೆ ಮರು ಮಾರ್ಗ ಮಾಡಲಾಗಿದೆ.
ಜುಲೈ 12ರ ಇಂದು ರಾತ್ರಿ 11.30ಕ್ಕೆ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ 12691 ಸಂಖ್ಯೆಯ ರೈಲು ಜುಲೈ 13ರ ನಾಳೆ ಮಧ್ಯಾಹ್ನ 12.20ಕ್ಕೆ ಶಿವಮೊಗ್ಗ ತಲುಪಲಿದೆ.
Also read: ಬಿದ್ದಾಗ ಸೊರಗೋದು, ಗೆದ್ದಾಗ ಸೊಕ್ಕು ಮಾಡೋದು ರಾಜಕಾರಣವಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಹಾಗೆಯೇ, ನಾಳೆ ಸಂಜೆ 5.15ಕ್ಕೆ ಶಿವವೊಗ್ಗದಿಂದ ಹೊರಡಲಿರುವ ರೈಲು ಜುಲೈ 14ರ ಬೆಳಗಿನ ಜಾವ 4.55ಕ್ಕೆ ಚೆನ್ನೈ ತಲುಪಲಿದೆ. ನಾಳೆ ಸಂಜೆ 5 ಗಂಟೆಗೆ ಈ ರೈಲಿಗೆ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಹಸಿರು ನಿಶಾನೆ ತೋರಲಿದ್ದಾರೆ.
ಯಾವೆಲ್ಲಾ ಕೋಚ್’ಗಳಿವೆ?
ಈ ಸೂಪರ್ ಫಾಸ್ಟ್ ರೈಲಿನಲ್ಲಿ ಒಟ್ಟು 22 ಬೋಗಿಗಳಿವೆ. ಒಂದು 1 ಎಸಿ ಕೋಚ್, ಎರಡು 2 ಟಯರ್ ಎಸಿ ಸ್ಪೀಪರ್, ಆರು 3 ಟಯರ್ ಎಸಿ ಸ್ಲೀಪರ್, ಆರು 2 ಸ್ಲೀಪರ್ ಕೋಚ್, ಎರಡು 2 ಸೀಟಿಂಗ್ ಕೋಚ್, ಒಂದು ಎಸ್’ಎಲ್’ಆರ್, ಒಂದು ಪವರ್ ಕಾರ್ ಹಾಗೂ ಮೂರು ಜನರಲ್ ಬೋಗಿಗಳು ಇವೆ.
ಹೀಗಿದೆ ವೇಳಾಪಟ್ಟಿ:
ಚೆನ್ನೈ-ಶಿವಮೊಗ್ಗ: (ಹೊರಡುವ ಸಮಯ)
ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್: 11.30 ರಾತ್ರಿ
ಪೆರಂಬೂರು:
ಅರಕ್ಕೋರಂ ಜಂಕ್ಷನ್: 12.25
ಶೋಲಿಂಗೂರ್: ಕಾಟ್ಪಾಡಿ ಜಂಕ್ಷನ್: 1.25
ಜೋಲಾರಪೇಟ್ ಜಂಕ್ಷನ್: 2.50
ಕುಪ್ಪಂ:
ಬಂಗಾರಪೇಟೆ ಜಂಕ್ಷನ್: 3.55
ವೈಟ್ ಫೀಲ್ಡ್:
ಕೃಷ್ಣರಾಜಪುರಂ: 4.40
ಎಸ್’ಎಂವಿಟಿ ಬೆಂಗಳೂರು: 6.00
ತುಮಕೂರು: 7.40
ತಿಪಟೂರು: 9.05
ಅರಸೀಕೆರೆ ಜಂಕ್ಷನ್: 9.35
ಕಡೂರು: 10.07
ಬೀರೂರು: 10.22
ತರೀಕೆರೆ: 10.49
ಭದ್ರಾವತಿ: 11.35
ಶಿವಮೊಗ್ಗ: 12.20(ಮಧ್ಯಾಹ್ನ ತಲುಪುವ ಸಮಯ)
ಶಿವಮೊಗ್ಗ-ಚೆನ್ನೈ(ಹೊರಡುವ ಸಮಯ)
ಶಿವಮೊಗ್ಗ: 5.15(ಸಂಜೆ)
ಭದ್ರಾವತಿ: 5.35
ತರೀಕೆರೆ: 5.55
ಬೀರೂರು: 6.25
ಕಡೂರು: 6.35
ಅರಸೀಕೆರೆ ಜಂಕ್ಷನ್: 7.15
ತಿಪಟೂರು: 7.38
ತುಮಕೂರು: 8.30
ಎಸ್’ಎಂವಿಟಿ ಬೆಂಗಳೂರು: 11.00
ಕೃಷ್ಣರಾಜಪುರಂ: 11.12
ವೈಟ್ ಫೀಲ್ಡ್: 11.24
ಬಂಗಾರಪೇಟೆ ಜಂಕ್ಷನ್: 11.57
ಕುಪ್ಪಂ: 12.28
ಜೋಲಾರಪೇಟೆ ಜಂಕ್ಷನ್: 1.25
ಕಾಟ್ಪಾಡಿ ಜಂಕ್ಷನ್: 2.35
ಶೋಲಿಂಗೂರ್: 3.05
ಅರಕ್ಕೋಣಂ ಜಂಕ್ಷನ್: 3.25
ಪೆರಂಬೂರು: 4.15
ಚೆನ್ನೈ ಸೆಂಟ್ರಲ್: 4.55(ಬೆಳಗಿನ ಜಾವ ತಲುಪುವ ಸಮಯ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post