ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿರೀಕ್ಷೆಯಂತೆ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಶಿವಕುಮಾರ್, ಉಪಮೇಯರ್ ಸ್ಥಾನಕ್ಕೆ ಲಕ್ಷ್ಮಿ ಶಂಕರನಾಯ್ಕ್ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ನಿಂದ ಮೇಯರ್ ಸ್ಥಾನಕ್ಕೆ ಆರ್.ಸಿ. ನಾಯ್ಕ್, ಉಪಮೇಯರ್ ಸ್ಥಾನಕ್ಕೆ ರೇಖಾ ರಂಗನಾಥ್ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಗೆ ಬಹುಮತ ಇರುವುದರಿಂದ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತವಾಗಿದೆ. ಮೇಯರ್ ಆಗಿ ಶಿವಕುಮಾರ್, ಉಪ ಮೇಯರ್ ಆಗಿ ಲಕ್ಷ್ಮಿ ಶಂಕರನಾಯ್ಕ್ ಆಯ್ಕೆ ಖಚಿತವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ನ 7 ಜನ ಸದಸ್ಯರು, ಎಸ್.ಡಿ.ಪಿ.ಐ. ಸದಸ್ಯೆ ಶಬಾನಾ ಖಾನಂ, ಜೆಡಿಎಸ್ ಸದಸ್ಯರಾದ ನಾಗರಾಜ ಕಂಕಾರಿ, ಸತ್ಯನಾರಾಯಣ ಬೆಂಬಲ ಸೂಚಿಸಿದ್ದಾರೆ.
ಬಿಜೆಪಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಎಲ್ಲಾ 25 ಸದಸ್ಯರು ಇದ್ದರು. ಇಬ್ಬರು ಶಾಸಕರು, ಒಬ್ಬರು ಸಂಸದರು, ಮೂವರು ವಿಧಾನ ಪರಿಷತ್ ಸದಸ್ಯರಿಗೆ ಮತದಾನದ ಹಕ್ಕು ಇದೆ. ಬಿಜೆಪಿಗೆ ಒಟ್ಟು 23 ಸದಸ್ಯರಿದ್ದು, ಪಕ್ಷೇತರ ಸದಸ್ಯೆ ಧೀರರಾಜ್ ಹೊನ್ನವಿಲೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಾಗರಾಜ್ ಕೂಡ ಪಕ್ಷೇತರ ಸದಸ್ಯರಾಗಿದ್ದು, ಅವರ ಬೆಂಬಲ ಯಾರಿಗೆ ಎಂಬುದು ನಿಗೂಢವಾಗಿದೆ. ಒಟ್ಟಿನಲ್ಲಿ 30 ಸದಸ್ಯರು ಬಿಜೆಪಿ ಬೆಂಬಲಕ್ಕೆ ನಿಲ್ಲುವುದು ಖಚಿತವಾಗಿದ್ದು, ವಿಜಯಲಕ್ಷ್ಮಿ ಬಿಜೆಪಿಗೆ ಒಲಿಯಲಿದ್ದಾಳೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post