ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಗುರುಗುಹ ವಾಗ್ಗೇಯ ಪ್ರತಿಷ್ಠಾನ ಟ್ರಸ್ಟ್ ಹಾಗೂ ಶ್ರೀ ಗುರುಗುಹ ಸಂಗೀತ ಸಮಗ್ರ ಇವರ ವತಿಯಿಂದ ಏಕವ್ಯಕ್ತಿ ಮನೋಧರ್ಮ ಪ್ರಸ್ತಿತಿ ಭಾರತೀಯ ಸಂಗೀತ ರಾಗದರ್ಶನ ಕಾರ್ಯಕ್ರಮವನ್ನು ಡಿ.9ರಿಂದ 11ರವರೆಗೆ ಪ್ರತಿ ದಿನ ಸಂಜೆ 6ಗಂಟೆಗೆ ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಗೀತ ಕಲಾ ಪ್ರೇರಕ ಡಾ. ಬಿ. ವೆಂಕಟರಾವ್ ರಿಗೆ ಸಮರ್ಪಣೆ ಹಾಗೂ ಸಂಗೀತ ಪರಮಹಂಸ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಆರಾಧನೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಡಿ.9ರ ಸಂಜೆ 6ಕ್ಕೆ ವಿದುಷಿ ಡಾ. ಕೆ.ಎಸ್. ಪವಿತ್ರ ನೆರವೇರಿಸುವರು. ಪ್ರವಚನಕಾರ ವಿದ್ವಾನ್ ಜಿ.ಎಸ್. ನಟೇಶ್ ಅಧ್ಯಕ್ಷತೆ ವಹಿಸುವರು. ಶ್ರೀರಾಮ ಸೇವಾ ಸಮಿತಿ ಕಾರ್ಯದರ್ಶಿ ಗುರುರಾಜ್ ಗಿರಿಮಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
Also read: ಕಾಂತಾರ-2 ಚಿತ್ರಕ್ಕಾಗಿ ಇತಿಹಾಸ ಹಿನ್ನೆಲೆಯ ಆಯುಧ ನೀಡಲು ಮುಂದಾದ ಕೇರಳ ರಾಜಮನೆತನ
ಡಿ.9ರ ಸಂಜೆ ಕಾರ್ಯಕ್ರಮದಲ್ಲಿ ವಿದ್ವಾನ್ ಸಿ.ಎಸ್. ಕೇಶವಚಂದ್ರ ಮೈಸೂರು ಇವರಿಂದ ಕೊಳಲುವಾದನ.
ಡಿ.10ರ ಸಂಜೆ 6 ಗಂಟೆಗೆ ವಿದ್ವಾನ್ ಎಂ.ಡಿ. ಅರ್ಜುನ್ ಬೆಂಗಳೂರು ಇವರಿಂದ ವಯೋಲಿನ್ ವಾದನ.
ಡಿ.11ರ ಸಂಜೆ 6ಗಂಟೆಗೆ ಬೆಂಗಳೂರಿನ ವಿದುಷಿ ಕೋವಿಲಡಿ ಅರ್ಚನಾ ಎಲ್.ರಾವ್ ರಿಂದ ಹಾಡುಗಾರಿಕೆ ಇರುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post