ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದು ನಗರದ ಶಂಕರ ಮಠ ರಸ್ತೆಯಲ್ಲಿರುವ ‘ಮೈತ್ರಿ’ ಹೀರೋ ಶೋ ರೂಮಿನ ಮೊದಲನೇ ಮಹಡಿಯಲ್ಲಿ ಸ್ವಾಸ್ಥ ಪರಿವಾರ ಸೆಟಲೈಟ್ ಕ್ಲಿನಿಕ್ ಶುಭಾರಂಭಗೊಂಡಿತು.
ಶಾಹಿ ಕಂಪನಿಯವರ ಸಹಯೋಗದೊಂದಿಗೆ, ಶಿವಮೊಗ್ಗ ನಗರದ ಕುಟುಂಬ ಕಲ್ಯಾಣ ಯೋಜನೆ (FPAI) ಬ್ರಾಂಚಿನ ಆಡಳಿತ ಮೇಲ್ವಿಚಾರಣೆಯಲ್ಲಿ ಈ ಕ್ಲಿನಿಕ್ ಕಾರ್ಯ ನಿರ್ವಹಿಸಲಿದೆ. ಈ ಕ್ಲಿನಿಕ್ ನಲ್ಲಿ ಶಾಹಿ ಕಂಪನಿಯ ಉದ್ಯೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ, ಔಷಧೋಪಚಾರ, ಸುಸಜ್ಜಿತ ಲ್ಯಾಬೋರೇಟರಿ ಸೇವೆ ಹೀಗೆ ಒಂದೇ ಸೂರಿನಡಿಯಲ್ಲಿ ಎಲ್ಲಾ ವ್ಯವಸ್ಥೆಗಳು ಅತ್ಯಂತ ಕನಿಷ್ಠ ದರದಲ್ಲಿ ದೊರೆಯಲಿದೆ.
ಉದ್ಘಾಟನೆಯನ್ನು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ವೈಧ್ಯಾಧಿಕಾರಿಗಳಾದ ಡಾಕ್ಟರ್ ನಟರಾಜ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮುಂಬೈನ ಹೆಡ್ ಕ್ವಾರ್ಟರ್ ನಿಂದ ಆಗಮಿಸಿದ್ದ ಡೈರೆಕ್ಟರ್ ಜನರಲ್ ಡಾ/ ಕಲ್ಪನಾ ಅಪ್ಟೆ, ಉಪ ನಿರ್ದೇಶಕರಾದ ಅಮಿತಾ ಧನು ಹಾಗೂ ಶಾಹಿ ಕಂಪನಿಯ ಮುಖ್ಯ ಅಧಿಕಾರಿಗಳಾದ ಶ್ರೀ. ಅಳಗಪ್ಪನ್, ಶ್ರೀ ಸುಕ್ವಂತ್ ಸಿಂಗ್, ಶ್ರೀ ಲಕ್ಷ್ಮಣ್ ಧರ್ಮಟ್ಟಿ, ತಾಲೂಕು ವೈದ್ಯಾಧಿಕಾರಿಗಳಾದ ಚಂದ್ರಶೇಖರ್, ಬ್ರಾಂಚಿನ ಅಧ್ಯಕ್ಷರಾದ ಡಾ. ಸಾತ್ವಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Also read: ಮಕ್ಕಳ ಪ್ರತಿಭೆ ಹೊರಹೊಮ್ಮಲು ವಸ್ತು ಪ್ರದರ್ಶನಗಳು ಉತ್ತಮ ವೇದಿಕೆ | ಮಧುಸೂದನ್
ಪೂರ್ವಾಧ್ಯಕ್ಷರುಗಳಾದ ಉಮೇಶ್ ಆರಾಧ್ಯ, ಡಾ. ಬಿರಾದಾರ್, ಚಂದ್ರಶೇಖರ್, ಪುಷ್ಪ ಶೆಟ್ಟಿ, ವಿಜಯಾ ಶ್ರೀಧರ್, ಉಪಾಧ್ಯಕ್ಷರಾದ. ಭಾರತಿ ಶೇಖರ್, ಖಜಾಂಚಿ ಸುರೇಖಾ ಮುರಳೀಧರ್, ಸದಸ್ಯರಾದ ಶಶಿಕಲಾ, ಮಂಜುನಾಥ ಅಪ್ಪಾಜಿ, ಡಾ/ ಪಲ್ಲವಿ, ಮ್ಯಾನೇಜರ್ ಉಮೇಶ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















