ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ಎಂದು ಹಿತೈಷಿಗಳು ಬಹಳಷ್ಟು ಒತ್ತಾಯ ಮಾಡುತ್ತಿರುವುದು ಸತ್ಯವಾಗಿದ್ದು, ಈ ಕುರಿತಂತೆ ಬೆಂಬಲಿಗರ ಅಭಿಪ್ರಾಯ ಕೇಳಿ, ಮುಂದಿನ ತೀರ್ಮಾನ ಮಾಡುವುದಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಿಮಗೆ ಅನ್ಯಾಯವಾಗಿದೆ. ಹೀಗಾಗಿ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಎಂದು ಹಿತೈಷಿಗಳು ಹೇಳುತ್ತಿರುವುದು ಸತ್ಯ. ಆದರೆ, ಈ ವಿಚಾರದಲ್ಲಿ ಅತ್ಯಂತ ಸೂಕ್ಷ್ಮವಾಗಿ ಎಲ್ಲ ಅಭಿಪ್ರಾಯ ಸಂಗ್ರಹಿಸಿ, ಮುಂದಿನ ತೀರ್ಮಾನ ಕೈಗೊಳ್ಳುವುದು ನನ್ನ ಜವಾಬ್ದಾರಿಯಾಗಿದೆ ಎಂದರು.
ನಿಮಗೆ ಅನ್ಯಾಯವಾಗಿದೆ ಎಂದು ಹಿತೈಷಿಗಳು ಹೇಳುತ್ತಿದ್ದಾರೆ. ಈ ಕುರಿತಂತೆ ಚರ್ಚೆ ಮಾಡಲು ಮಾರ್ಚ್ 15ರಂದು ಬಂಗಾರ ಭವನದಲ್ಲಿ ಸಭೆಯಲ್ಲೂ ಸಹ ಕರೆದಿದ್ದಾರೆ. ನಾನೂ ಸಹ ಪಾಲ್ಗೊಳ್ಳಲಿದ್ದೇನೆ. ಯಾವುದೇ ಸಮಸ್ಯೆಗಳ ಬಗ್ಗೆ ನಾಲ್ಕು ಗೋಡೆ ನಡುವೆ ಚರ್ಚೆ ಮಾಡುವ ಸಂಸ್ಕಾರವನ್ನು ಪಕ್ಷ ನನಗೆ ಹೇಳಿಕೊಟ್ಟಿದೆ. ಹೀಗಾಗಿ, ಸಭೆಯಲ್ಲಿಯೇ ಏನೆಲ್ಲಾ ಅಭಿಪ್ರಾಯ ವ್ಯಕ್ತವಾಗುತ್ತದೆ ಎಂದು ನೋಡೋಣ ಎಂದರು.
Also read: ರಾಮೇಶ್ವರಂ ಕೆಫೆ ಸ್ಪೋಟ | ಎನ್’ಐಎಯಿಂದ ಬಳ್ಳಾರಿಯಲ್ಲಿ ಶಬ್ಬೀರ್ ಎಂಬಾತ ವಶಕ್ಕೆ
ಪಕ್ಷದಲ್ಲಿ ನಾನು ಸೀನಿಯರ್ ಮೋಸ್ಟ್ ಅಲ್ಲ ಎಂದು ಹೇಳಿದರೆ ಅದು ತಪ್ಪಾಗುತ್ತದೆ. ಆದರೆ, ಪಕ್ಷ ನನಗೆ ಶಾಸಕನಿಂದ ಹಿಡಿದು ಡಿಸಿಎಂವರೆಗೆ ಎಲ್ಲವನ್ನೂ ಸಹ ಕೊಟ್ಟಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಚುನಾವಣಾ ರಾಜಕೀಯದಿಂದ ನೀವು ಹಿಂದೆ ಸರಿಯಿರಿ ಎಂದು ಪಕ್ಷ ಹೇಳಿತು. ಸ್ವತಃ ಪ್ರಧಾನಿಯವರೇ ಕರೆ ಮಾಡಿ ಮಾತನಾಡಿದರು. ಅದಕ್ಕೆ ಗೌರವ ಕೊಟ್ಟು ಹಿಂದೆ ಸರಿದೆ. ಈಗ ಪುತ್ರನ ಬದಲು ತಾವೇ ಸ್ಪರ್ಧಿಸಿ ಎಂದರೆ ಆನಂತರ ಮುಂದಿನ ತೀರ್ಮಾನ ಮಾಡುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post