ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಎಪಿಎಂಸಿ ಯಾರ್ಡ್‌ನ ಪ್ರತಿಷ್ಠಿತ ಡಿ. ಮಲ್ಕಪ್ಪ ಅಂಡ್ ಸನ್ಸ್ ವತಿಯಿಂದ ಮೇ 31ರಿಂದ ಜೂ.2ರವರೆಗೆ ನೈಸರ್ಗಿಕವಾಗಿ ಮಾಗಿಸಿದ ಹತ್ತು ಹಲವು ಬಗೆಯ ಮಾವಿನ ಹಣ್ಣುಗಳ ಮೇಳ ಆರಂಭವಾಗಲಿದೆ. ಮಾವು ಪ್ರಿಯರಿಗೆ ಇಂದೊಂದು ಸಂತಸದ ಸುದ್ಧಿ.
ನಾವು ಕಂಡೂ ಕೇಳರಿಯದ ಹಲವು ಮಾವಿನ ಹಣ್ಣುಗಳು ಸಹ ಈ ಮೇಳದಲ್ಲಿ ಲಭ್ಯವಿದೆ. ಪೈಪೋಟಿ ದರದಲ್ಲಿ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ.
ರತ್ನಗಿರಿ ಆಲ್ಫೋನ್ನಾ, ರಸಪುರಿ, ರಾಮನಗರ ಬಾದಾಮಿ, ತಮಿಳುನಾಡಿನ ಇಮಾಮ್ ಪಸಂದ್, ಆಂಧ್ರ ಮಲ್ಲಿಕಾ, ಬೇನಿಷಾ, ಬೆಂಗಳೂರು ಲಾಲ್‌ಬಾಗ್, ಶಕರಗುಟ್ಟಿ (ಸಾಸಿವೆ ಮಾವಿನ ಹಣ್ಣು), ನಾಟಿ ಮಾವಿನ ಹಣ್ಣು, ಗುಜರಾತಿ ಕೇಸರ್, ಚನ್ನಪಟ್ಟಣ ದಿಲ್‌ಪಸಂದ್, ಉತ್ತರಪ್ರದೇಶದ ದಶೇರಿ ಮತ್ತು ಕಸಿ ಮುಂತಾದ ಮಾವಿನ ಹಣ್ಣುಗಳ ಸಹ ಇಲ್ಲಿ ಲಭ್ಯವಿರುತ್ತದೆ.
Also read: ಡಾ.ಧನಂಜಯ ಸರ್ಜಿ ವಿರುದ್ಧ ರಘುಪತಿ ಭಟ್ ಸ್ಪರ್ಧೆ | ಯಡಿಯೂರಪ್ಪ ಹೇಳಿದ್ದೇನು?
ಮಲ್ಲಪ್ಪ ಅಂಡ್ ಸನ್ಸ್ ಮಾವಿನ ಹಣ್ಣುಗಳು ಹಾಗೂ ಇತರೆ ತಾಜಾ ಹಣ್ಣುಗಳ ಮಾರಾಟದಲ್ಲಿ ಪ್ರಸಿದ್ಧಿ ಪಡೆದಿದೆ. 5 ಕೆಜಿ, 10 ಕೆಜಿ ಹಾಗೂ ಅದಕ್ಕೂ ಹೆಚ್ಚು ತೂಕದ ಮಾವಿನ ಹಣ್ಣುಗಳು ಮೇಳದಲ್ಲಿ ಸಿಗುತ್ತದೆ. ಶಿವಮೊಗ್ಗದ ಜನತೆ ತಾವು ತಮ್ಮ ಆಯ್ಕೆ ಮಾಡಿ ಗುಣಮಟ್ಟದ ಹಣ್ಣುಗಳನ್ನು ಖರೀದಿಸಲು ಇದೊಂದು ಅಪೂರ್ವ ಸದವಕಾಶವಾಗಿದೆ. ನೆನಪಿಡಿ ಮೇ 31ರಿಂದ ಜೂ.2ರವರೆಗೆ ಮಾತ್ರ ಈ ಅವಕಾಶ ಇರುತ್ತದೆ. ತ್ವರೆ ಮಾಡಿ ಈ ದಿನಗಳಲ್ಲಿ ನೀವು ಮಲ್ಕಪ್ಪ ಅಂಡ್ ಸನ್ಸ್‌ಗೆ ಭೇಟಿ ನೀಡಿ ಅವಕಾಶದ ಸದುಪಯೋಗ ಪಡೆಯುವಂತೆ ಮಾಲೀಕರಾದ ಮಲ್ಕಪ್ಪ, ಬಾಳೆಕಾಯಿ ಮೋಹನ್ ಮತ್ತು ಮಂಜು ತಿಳಿಸಿದ್ದಾರೆ.
ಆಸಕ್ತರು 94492 65196, 94807 29809ರಲ್ಲಿ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post