ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆಯ 2023-24ನೇ ಸಾಲಿನ 3.31 ಕೋಟಿ ರೂ. ಉಳಿತಾಯ ಆಯ ವ್ಯಯವನ್ನು ತೆರಿಗೆ ನಿಷ್ಕರಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಆರತಿ ಆ.ಮ. ಪ್ರಕಾಶ್ ಶುಕ್ರವಾರ ಮಂಡಿಸಿದರು.
ನಗದು ಮತ್ತು ಬ್ಯಾಂಕ್, ಆರಂಭದ ಶಿಲ್ಕು 11,309.98 ಲಕ್ಷ ರೂ. ಇದ್ದು, ರಾಜಸ್ವ ಆದಾಯ 14,257.49 ಲಕ್ಷ ರೂ., ಬಂಡವಾಳ ಆದಾಯ 4119 ಲಕ್ಷ ರೂ., ಅಸಾಧರಣ ಆದಾಯ 2258 ಲಕ್ಷ ರೂ. ಸೇರಿ ಒಟ್ಟು 20,634.49 ಲಕ್ಷ ಒಟ್ಟು ಜಮೆ ಆಗಿದೆ ಎಂದರು.
ರಾಜಸ್ವ ವೆಚ್ಚ 12,879.66 ಲಕ್ಷ, ಬಂಡವಾಳ ವೆಚ್ಚ 15,467 ಲಕ್ಷ, ಅಸಾಧರಣ ವೆಚ್ಚ 32,66 ಲಕ್ಷ ರೂ. ಒಟ್ಟು 31,612.66 ಲಕ್ಷ ರೂ. ಒಟ್ಟು ಪಾವತಿಯಾಗಿದೆ. ಬಾಕಿ ಇರುವ ಹಿಂದಿನ ಯೋಜನೆಗಳನ್ನು ಬಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಆಡಳಿತ ಭವನಕ್ಕೆ 5 ಕೋಟಿ, ವಲಯ ಕಚೇರಿಗೆ 3 ಕೋಟಿ ರೂ., ಒಳಾಂಗಣ ಕ್ರೀಡಾಂಗಣ ಮತ್ತು ಆಟದ ಮೈದಾನಕ್ಕೆ 2 ಕೋಟಿ., ನೀರಿನ ಪ್ರಯೋಗಾಲಯಕ್ಕೆ 60 ಲಕ್ಷ ರೂ., ಸರ್ಕಾರಿ ಕಚೇರಿಗಳಲ್ಲಿ ಮಳೆ ನೀರು ಕೊಯ್ಲಿಗೆ 50 ಲಕ್ಷ, ಸರ್ಕಾರಿ ಕಚೇರಿಗಳಿಗೆ ವೈಟ್ ಟಾಪಿಂಗ್ ಮಾಡಲು 20 ಲಕ್ಷ ರೂ., ಹೈಟೆನ್ಷನ್ ವಿದ್ಯುತ್ ಮಾರ್ಗ ಹಾದು ಹೋಗುವ ಕಡೆಗಳ್ಲಲಿ ಸೌದರ್ಯಿಕರಣಕ್ಕೆ 200 ಲಕ್ಷ ರೂ. ವರ್ಡ್ ಉನ್ನತೀ ಕರಣ ಯೋಜನಗೆ 2100 ಲಕ್ಷ ರೂ. ಒದಗಿಸಲಾಗಿದೆ ಎಂದರು.
ಪ್ರಾಣಿಗಳ ಸಂರಕ್ಷಣೆ ಯೋಜನೆಗೆ 30 ಲಕ್ಷ, ತ್ಯಾಜ್ಯ ನಿರ್ವಹಣೆಗೆ ಹೊಸ ಯಂತ್ರಗಳ ಖರೀದಿಗೆ 4 ಕೋಟಿ, ಆಧುನಿಕ ಕಸಾಯಿಖಾನೆಗೆ 5 ಕೋಟಿ, ಗೋವು ಸಂರಕ್ಷಣಾ ಯೋಜನೆಗೆ 50 ಲಕ್ಷ ರೂ., ಕೌರಕಾರ್ಮಿಕರ ಕಲ್ಯಾಣಕ್ಕೆ 5 ಲಕ್ಷ, ಸೀ ಸಬಲೀಕಣ ಯೋಜನೆ, ಪಾಲಿಕೆ ವ್ಯಾಪ್ತಿಯ ಕೆರೆಗಳ ಕಾಯಕಲ್ಪ, ಲವಕುಶ ಯೋಜನೆ, ಸಿದ್ದಗಂಗಾ ಶ್ರೀ ವಿದ್ಯಾ ಸರಸ್ವತಿ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ವಿರೋಧ ಪಕ್ಷಗಳ ಪ್ರತಿಭಟನೆ
ಆಯವ್ಯಯ ಸಭೆ ಬೆಳಗ್ಗೆ 11 ಗಂಟೆಗೆ ನಿಗದಿ ಮಾಡಲಾಗಿತ್ತಾದರೂ ಸುಮಾರು ಒಂದು ಗಂಟೆ ತಡವಾಗಿ ಆರಂಭವಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಆಯವ್ಯಯ ಕನ್ನಡಿಯೊಳಗಿನ ಗಂಟೆಂದು ಘೋಷಣೆ ಕೂಗುತ್ತಾ ಕನ್ನಡಿ ಹಿಡಿದು ಸಭಾಂಗಣದ ಒಳಗೆ ಬಂದರು.
ಬಜೆಟ್ ಸಭೆ ಆರಂಭವಾಗುತ್ತಿದ್ದಂತೆ ಆಯವ್ಯಯ ಮಂಡನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕಳೆದ ಸಾಲಿನಲ್ಲಿ ರೂಪಿಸಲಾಗಿರುವ ಸುಮಾರು 20 ಕ್ಕೂ ಹೆಚ್ಚು ಯೋಜನೆಗಳನ್ನು ಅನುಷ್ಠಾನಗೊಳಿಸಿಲ್ಲ. ಎಲ್ಲವೂ ಕನ್ನಡಿಯೊಗಿನ ಗಂಟಾಗಿದೆ ಎಂದು ಸದಸ್ಯರಾದ ರಮೇಶ್ ಹೆಗಡೆ, ರೇಖಾ ರಂಗನಾಥ, ಯೋಗೀಶ್, ನಾಗರಾಜ್ ಕಂಕಾರಿ, ಮೆಹಕ್ ಶರೀ, ಆರ್.ಸಿ.ನಾಯ್ಕ ಮೊದಲಾದವರು ಆಕ್ಷೇಪ ವ್ಯಕ್ತಪಡಿಸಿದರು.
Also read: ಏರ್‌ಪೋರ್ಟ್ ಲೋಕಾರ್ಪಣೆಗೆ ಭರದ ಸಿದ್ಧತೆ: ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿಯಮಗಳೇನು?
ಚರ್ಚೆ ಮಾಡದೆ ಹೊರ ನಡೆದರು..
ಬಜೆಟ್ ಮಂಡನೆಗೆ ವಿರೋಧ ಪಕ್ಷದ ಸದಸ್ಯರು ತೀವ್ರ ಅಡ್ಡಿಪಡಿಸಿದರೆಂಬ ನೆಪ ಒಡ್ಡಿ ಆಡಳಿತ ಪಕ್ಷದ ಸದಸ್ಯರೆಲ್ಲಾ ಚರ್ಚೆ ಮಾಡದೆ ಸ`ಯಿಂದ ಹೊರ ನಡೆದರು. ವಿರೋಧ ಪಕ್ಷದ ಸದಸ್ಯರು, ಆಯುಕ್ತರು ಹಾಗೂ ಅಕಾರಿಗಳು ಮಾತ್ರ ಸಭೆಯಲ್ಲಿ ಉಳಿದು ಮುಜುಗರಕ್ಕೀಡಾಗುವಂತಾಗಿತ್ತುಘಿ.
ಇದರಿಂದ ಕೆರಳಿದ ವಿರೋಧ ಪಕ್ಷದ ಸದಸ್ಯರು ನಾವೇನು ಊಟಕ್ಕೆ ಬಂದಿಲ್ಲ. ಬಜೆಟ್ ಮೇಲೆ ಚರ್ಚೆ ಮಾಡದೆ ಆಡಳಿತ ಪಕ್ಷದ ಸದಸ್ಯರು ಬೇಜವಾಬ್ದಾರಿಯಿಂದ ಹೋಗಿದ್ದಾರೆಂದು ಅವರ ವಿರುದ್ಧ ಘೋಷಣೆ ಕೂಗಿ ಸಭಾಂಗಣದ ಮುಖ್ಯದ್ವಾರದಲ್ಲಿಯೇ ಪ್ರತಿಭಟನೆ ನಡೆಸಿದರು.
ಮೇಯರ್ ಶಿವಕುಮಾರ್ ಅ`ಕ್ಷತೆ ವಹಿಸಿದ್ದುಘ, ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ, ಆಯುಕ್ತ ಮಾಯಣ್ಣ ಗೌಡ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post