ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸವಳಂಗ ರಸ್ತೆಗೆ ಸಮೀಪದ ಕುವೆಂಪು ನಗರದಲ್ಲಿ ನಿನ್ನೆ ತಡರಾತ್ರಿ ಚಿರತೆ #Leopard ಕಾಣಿಸಿಕೊಂಡಿದ್ದು, ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರಯಾಗಿದೆ.
ಕುವೆಂಪು ನಗರದ ಮನೆಯೊಂದರ ಮುಂಭಾಗದಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ದಾಖಲಾಗಿದೆ. ಮನೆಯ ಪಕ್ಕದಲ್ಲಿ ಚಿರತೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ದಾಖಲಾಗಿದ್ದು, ಅತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಕುವೆಂಪು ನಗರ, ರಾಗಿಗುಡ್ಡದ ನಿವಾಸಿಗಳು ಎಚ್ಚರಿಕೆಯಿಂದಿರುವುದು ಸೂಕ್ತವಾಗಿದೆ.
Also read: ವಿದುಷಿ ಶಮಾ ಕೃಷ್ಣ ನೇತೃತ್ವದಲ್ಲಿ ಕಲಾಭಿವ್ಯಕ್ತಿಗೆ ಹೊಸ ಆಯಾಮ ತೆರೆದ “ನೃತ್ಯಾರ್ಣವ”
ಇನ್ನು, ಕೆಲವು ತಿಂಗಳ ಹಿಂದೆ ಜೆಎನ್’ಎನ್’ಸಿಇ ಕಾಲೇಜು ಆಸುಪಾಸು ಸೇರಿದಂತೆ ಈ ಪ್ರದೇಶದಲ್ಲಿ ರಾತ್ರಿ ವೇಳೆ ಚಿರತೆ ಓಡಾಡುತ್ತಿದೆ ಎಂದು ಹೇಳಲಾಗಿತ್ತು. ಹಲವು ಸ್ಥಳೀಯರು ಚಿರತೆ ಓಡಾಡುವುದನ್ನು ನೋಡಿರುವುದಾಗಿ ಹೇಳಿದ್ದರು. ಈಗ ಮತ್ತೆ ಅದೇ ಆತಂಕ ಸೃಷ್ಠಿಯಾಗಿದೆ.
ಚಿರತೆ ಓಡಾಟ ಸಿಸಿ ಟಿವಿಯಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಕ್ರಮಕೈಗೊಂಡು ಆತಂಕ ನಿವಾರಿಸಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















