ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್ ಸರ್ಕಾರ ಬಡವರಿಗೆ ಭಾಗ್ಯಗಳನ್ನು ನೀಡಿ ಇನ್ನೊಂದು ಜೇಬಿನಿಂದ ಕಿತ್ತುಕೊಳ್ಳುವ ಪಿಕ್‍ಪಾಕೇಟ್ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ #H D Kumaraswamy ಲೇವಡಿ ಮಾಡಿದ್ದಾರೆ.
ಅವರು ಇಂದು ನಗರದ ಗೋಪಿವೃತ್ತದಲ್ಲಿ ಸಂಸದ ಬಿ.ವೈ. ರಾಘವೇಂದ್ರ #B Y Raghavendra ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಭಾಗವಹಿಸಿ ಬಳಿಕ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮೂರು ಬಾರಿ ಸಂಸದರಾಗಿ ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದೀರಿ. ಇವತ್ತಿನ ಐತಿಹಾಸಿಕ ಮೆರವಣಿಗೆಯನ್ನು ನೋಡಿದ ಬಳಿಕ ಇನ್ನೂ ಹೆಚ್ಚಿನ ಅಂತರದಿಂದ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶದ ಭದ್ರತೆಗಾಗಿ ಮತ್ತು ಅಭಿವೃದ್ಧಿಗಾಗಿ ಮೋದಿ #Modi ಸರ್ಕಾರ ಅನಿವಾರ್ಯ ಎಂದು ಜನರ ಭಾವನೆ ಇದೆ ಎಂದರು.
Also read: ಒಂದೇ ದಿನ ಎರಡು ನಾಮಪತ್ರ ಸಲ್ಲಿಸಿದ ಬಿ.ವೈ. ರಾಘವೇಂದ್ರ
ಕಾಂಗ್ರೆಸ್‍ನ ಸುಳ್ಳು ಪ್ರಣಾಳಿಕೆಯಂತೆ ಮಹಿಳೆಯರಿಗೆ ಒಂದು ಲಕ್ಷ ರೂ. ನೀಡಲು 75 ಲಕ್ಷ ಕೋಟಿ ಹಣ ಬೇಕು. ದೇಶದ ಬಜೆಟ್ 45 ಲಕ್ಷ ಕೋಟಿ ಇದೆ. ಅದು ಯಾವ ರೀತಿ ಸುಳ್ಳು ಹೇಳುತ್ತಾರೆ ಎಂಬುವುದನ್ನು ಜನ ಅರಿತುಕೊಳ್ಳಬೇಕು. ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬ ಖಾತರಿ ಅವರಿಗೆ ಇದೆ. ಈಗಾಗಲೇ ಗೃಹಲಕ್ಷ್ಮೀ 2000 ನೀಡಿ ಮದ್ಯದಂಗಡಿಗೆ 25 ರೂ.ಗಳಿಗೆ ದೊರೆಯುವ ಮದ್ಯಕ್ಕೆ 250 ರೂ. ಮಾಡಿದ್ದಾರೆ. ಒಂದು ಕಡೆ ನೀಡಿ ಇನ್ನೊಂದು ಕಡೆ ಕಿತ್ತುಕೊಳ್ಳುತ್ತಿದ್ದಾರೆ ಎಂದರು.
ರೈತರಿಗೆ ಬರಗಾಲಕ್ಕೆ ಯಾವುದೇ ಸಹಕಾರ ನೀಡಿಲ್ಲ. ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದಿಂದ ಬಿ.ಎಸ್.ವೈ. ನೀಡಿದ 4 ಸಾವಿರ ರೂ.ಗಳನ್ನು ಕೂಡ ನಿಲ್ಲಿಸಿದ್ದಾರೆ. ಬಿಕ್ಷೆ ನೀಡುವ ಹಾಗೆ 2000 ರೂ. ರೈತರಿಗೆ ಪರಿಹಾರ ವಿತರಿಸಿದ್ದಾರೆ. 5 ಸಾವಿರ ರೂ.ಗಳಿಗೆ ನಾವು ಸಮ್ಮಿಶ್ರ ಸರ್ಕಾರದಲ್ಲಿ ರೈತರಿಗೆ ಟ್ರಾನ್ಸ್‍ಫಾರ್ಮರ್ ಹಾಕಿ ವಿದ್ಯುತ್ ನೀಡುತ್ತಿದ್ದೇವು. ಈಗ 2.5 ಲಕ್ಷ ಕಿತ್ತುಕೊಳ್ಳುತ್ತಿದ್ದಾರೆ. ಸಬ್ ರಿಜಿಸ್ಟರ್ ಸ್ಟಾಂಪ್ ಡ್ಯೂಟಿ ಏರಿಕೆ ಮಾಡಿದ್ದಾರೆ ಎಂದರು.
31 ಲಕ್ಷ ಕೇಂದ್ರ ಸರ್ಕಾರದ ಹುದ್ದೆಗಳನ್ನು ತುಂಬಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಅವರದೇ ಸರ್ಕಾರ ರಾಜ್ಯದಲ್ಲಿದೆ. ಖಾಲಿ ಇರುವ 2.75 ಲಕ್ಷ ಹುದ್ದೆಯನ್ನು ಮೊದಲು ಭರ್ತಿ ಮಾಡಲಿ. ಕೇಂದ್ರದಲ್ಲಿ ಮೋದಿ ಸರ್ಕಾರ ಖಚಿತ. ಜನ ಅಭಿವೃದ್ಧಿ ಇಲ್ಲದೇ ಬೇಸತ್ತಿದ್ದು, ಚುನಾವಣೆಯ ನಂತರ ರಾಜ್ಯದಲ್ಲೂ ಕೂಡ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ಬರಬಹುದು. ಬಿಎಸ್’ವೈ, ಬೊಮ್ಮಾಯಿ ಮತ್ತು ನಾನು ಮುಖ್ಯಮಂತ್ರಿ ಇದ್ದಾಗ ಯಾವತ್ತು ಬರಗಾಲ ಬಂದಿರಲಿಲ್ಲ, ಕಾಂಗ್ರೆಸ್ ಪಕ್ಷ ಬಂದಾಗ ಬರಗಾಲ ಬರುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post