ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಕೆಎಸ್’ಆರ್’ಟಿಸಿ ಬಸ್ ನಿಲ್ದಾಣದಲ್ಲಿ #KSRTC Bus stand ನಡೆದಿದ್ದ ಪ್ರಕರಣದ ಪತ್ತೆ ಕಾರ್ಯ ಆರಂಭಿಸಿದ್ದ ಪೊಲೀಸರಿಗೆ 7 ಪ್ರಕರಣಗಳು ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಭದ್ರಾವತಿಯ 5 ಮಂದಿಯನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?
ಜೆಸಿ ನಗರದ ಮಹಿಳೆಯೊಬ್ಬರು ತಮ್ಮ ಕುಟುಂಬದೊಂದಿಗೆ ಸಂಬಂಧಿಕರ ಮದುವೆಗಾಗಿ ದಾವಣಗೆರೆಗೆ ಹೊರಟಿದ್ದರು. ಶಿವಮೊಗ್ಗ ಕೆಎಸ್’ಆರ್’ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ, ಫೋನ್ ಮಾಡಲು ವ್ಯಾನಿಟಿ ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿಟ್ಟಿದ್ದ ಬಂಗಾರದದ ಆಭರಣ ಕಳುವಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ದಾಖಲಿಸಿದ್ದ ದೂರಿನ ಆಧಾರದಲ್ಲಿ ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದರು.
ಪ್ರಕರಣದಲ್ಲಿ ಭದ್ರಾವತಿ ಹೊಸಮನೆ ಹನುಮಂತನಗರದ ಶಾಂತಿ ಕರ್ಕಿ(31), ಮೀನಾಕ್ಷಿ(38), ಸಾವಿತ್ರಿ ಬಾಬಾ(29), ಬೋವಿ ಕಾಲೋನಿಯ ದುರ್ಗಾ ಸಣ್ಣದುರ್ಗಾ(29) ಹಾಗೂ ಹೊಸಮನೆ ಹನುಮಂತನಗರದ ಸುಶೀಲಮ್ಮ(66) ಎನ್ನುವವರನ್ನು ಹೊಸಮನೆ ಪೊಲೀಸರ ಮೂಲಕ ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.
Also read: ಹೊಳೆಹೊನ್ನೂರು | ಗೋಡೆಗೆ ಕನ್ನ ಹಾಕಿ ಜ್ಯುವೆಲರಿ ಶಾಪ್’ನಲ್ಲಿ ಕಳ್ಳತನ
ಬಂಧಿತ ಆರೋಪಿಗಳಿಂದ 7 ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಾಜು 8,13,000 ರೂ.ಗಳ 122 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಎಸ್’ಪಿ ಮಿಥುನ್ ಕುಮಾರ್, ಎಎಸ್’ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ. ಕಾರಿಯಪ್ಪ, ಅವರುಗಳು ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಬಾಬು ಆಂಜಿನಪ್ಪ, ಶಿವಮೊಗ್ಗ – ಎ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ರವಿ ಪಾಟೀಲ್, ಪಿ.ಐ. ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಎಎಸ್’ಐ ನಾಗರಾಜ್, ಎಚ್’ಸಿ ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ, ಸಿಪಿಸಿಗಳಾದ ಚಂದ್ರನಾಯ್ಕ, ಗುರುನಾಯ್ಕ, ನಿತಿನ್, ಪುನೀತ್ ರಾವ್, ಪ್ರಕಾಶ್ ಹಾಗೂ ಮಹಿಳಾ ಸಿಬ್ಬಂದಿ ದೀಪ ಎಸ್ ಹುಬ್ಬಳಿ, ಪೂಜಾ, ಸುಮಿತ್ರಾಬಾಯಿ, ಲಕ್ಷಿö್ಮ ಅವರನ್ನು ಒಳಗೊಂಡ ತನಿಖಾ ತಂಡ ಕಾರ್ಯಾಚರಣೆ ನಡೆಸಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post