ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಲಾಕ್ ಡೌನ್’ನಿಂದ ಸಂಕಷ್ಟದಲ್ಲಿರುವ ಜಿಲ್ಲೆಯ ಸಣ್ಣ, ಮದ್ಯಮ ಹಾಗೂ ಆನ್’ಲೈನ್ ನ್ಯೂಸ್ ಪೋರ್ಟಲ್’ಗಳಿಗೆ ಆರ್ಥಿಕ ನೆರವು ಹಾಗೂ ಜಾಹೀರಾತು ನೀಡಬೇಕು ಎಂದು ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ಮೇಯರ್ ಸುನಿತಾ ಅಣ್ಣಪ್ಪ ಅವರಿಗೆ ಇಂದು ಮನವಿ ಸಲ್ಲಿಸಲಾಗಿದೆ.
ಮೇಯರ್ ಅವರನ್ನು ಭೇಟಿಯಾದ ಸಂಘದ ಪ್ರಮುಖರು, ಲಾಕ್’ಡೌನ್’ನಿಂದ ಜಾಹೀರಾತು ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಇಂತಹ ಸಂದರ್ಭದಲ್ಲಿ ಪಾಲಿಕೆಯ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯಿಂದ ಆರ್ಥಿಕ ನೆರವು ಹಾಗೂ ಜಾಹೀರಾತು ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಭಂಡಿಗಡಿ ನಂಜುಂಡಪ್ಪ. ಎಚ್.ಎನ್. ಮಂಜುನಾಥ್, ನಾವಿಕ ರಂಜಿತ್. ಗಾ.ರಾ. ಶ್ರೀನಿವಾಸ್, ನಾಗೇಶ್ ನಾಯ್ಕ, ಎನ್. ಮಂಜುನಾಥ್. ಜಿ.ಆರ್. ಷಡಾಕ್ಷರಪ್ಪ, ರಾಕೇಶ್ ಡಿಸೋಜಾ, ಶಶಿಕುಮಾರ್, ಮಂಜುಶೆಟ್ಟಿ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post