ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಮೆಡಿಕಲ್ ಕಾಲೇಜಿನ ಬಳಿಯಲ್ಲಿ ಕಾರೊಂದರಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ತುಂಗಾನಗರ ಠಾಣೆ ವ್ಯಾಪ್ತಿಯ ಅನುಪಿನಕಟ್ಟೆ ರಸ್ತೆಯ ತುಂಗಾ ಮೇಲ್ದಂಡೆ ಚಾನಲ್ ಬಳಿಯಲ್ಲಿ ಇಬ್ಬರು ವ್ಯಕ್ತಿಗಳು ಸ್ಕೋಡಾ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ.

Also read: ಶಿವಮೊಗ್ಗ | ಬೃಹತ್ ಸ್ವದೇಶಿ ಮೇಳ | ಒಂದು ಲಕ್ಷ ಜನ ಸೇರುವ ನಿರೀಕ್ಷೆ | ಮಳಿಗೆಗೆ ಬುಕ್ಕಿಂಗ್
ಎಸ್ಪಿ ಮಿಥುನ್ ಕುಮಾರ್ SP Mithun Kumar ಮತ್ತು ಅಡಿಷನಲ್ ಎಸ್ಪಿ ಅನಿಲ್ ಕುರ್ಮಾ ಭೂಮರಡ್ಡಿ, ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಾಲರಾಜ್ ಮತ್ತು ತುಂಗ ನಗರ ಪಿಐ ಮಂಜುನಾಥ್ ಬಿರವರ ಮೇಲ್ವಿಚಾರಣೆಯಲ್ಲಿ ಪಿಎಸ್’ಐ ಶಿವಪ್ರಸಾದ್ ಮತ್ತು ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ.











Discussion about this post