ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನಲ್ಲಿ Adichunchanagiri PU College ಕಟ್ಟಡದ ಮೇಲಿನಿಂದ ವಿದ್ಯಾರ್ಥಿನಿಯೊಬ್ಬಳು ಬಿದ್ದ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಮೇಘಶ್ರೀ (17) ಎಂದು ಗುರುತಿಸಲಾಗಿದ್ದು, ಇಂದು ಮುಂಜಾನೆ ಘಟನೆ ನಡೆದಿದೆ.

ಘಟನೆ ವಿಚಾರ ತಿಳಿಯುತ್ತಿದ್ದಂತೆಯೇ, ಮೇಘಶ್ರೀ ಪೋಷಕರು, ಸಂಬಂಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳವರು ಕಾಲೇಜಿಗೆ ದೌಡಾಯಿಸಿದ್ದಾರೆ. ಆದರೆ, ಕಾಲೇಜು ಆವರಣಕ್ಕೆ ಯಾರಿಗೂ ಪ್ರವೇಶ ನೀಡದೇ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನೂ ಸಹ ನಡೆಸಲಾಯಿತು.

Also read: ಮಿಚಾಂಗ್ ಚಂಡಮಾರುತದಿಂದ ಅತಿವೃಷ್ಟಿ ಹಿನ್ನೆಲೆ: ಪರಿಹಾರ ಸಾಮಾಗ್ರಿ ವಾಹನಕ್ಕೆ ವಿಜಯೇಂದ್ರ ಚಾಲನೆ
ಈ ವೇಳೆ ಮಧ್ಯಪ್ರವೇಶಿಸಿ ಪೊಲೀಸರು, ಆಡಳಿತ ಮಂಡಳಿಯವರು ಸ್ಪಷ್ಟನೆ ನೀಡುವವರೆಗೆ ಕಾಲೇಜು ಆವರಣದಲ್ಲಿ ಧರಣಿ ಮುಂದುವರೆಸುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ಕಾಲೇಜು ಆವರಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.











Discussion about this post