ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಗರ ರಸ್ತೆಯ ಮುತ್ತಿನಕೊಪ್ಪ ಬಳಿಯಲ್ಲಿ ಇಂದು ಮುಂಜಾನೆ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತರಾದವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮೂಲದವರು ಎಂದು ತಿಳಿದುಬಂದಿದೆ.
ಮೃತರನ್ನು ಚಂದ್ರು, ಸಿದ್ದಣ್ಣ ಹಾಗೂ ಇಮಾಮ್ ಸಾಬ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಚಳ್ಳಕೆರೆ ಬಳಿಯ ಬೆಳವನ್ನೂರು ಮೂಲದವರು ಎಂದು ಹೇಳಲಾಗಿದೆ. ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಇವರೆಲ್ಲಾ ಆಯನೂರು ಕಡೆಯಿಂದ ಚಳ್ಳಕೆರೆಗೆ ಹೋಗುತ್ತಿದ್ದರು. ಈ ವೇಳೆ ಮುತ್ತಿನಕೊಪ್ಪದ ಬಳಿ ಇನ್ನೋವಾ ಕಾರಿಗೆ ಡಿಕ್ಕಿಯಾಗಿದೆ.
Also read: ಮೊಬೈಲ್ ಚಾರ್ಜ್’ಗೆ ಹಾಕುವ ವೇಳೆ ಕರೆಂಟ್ ಶಾಕ್ | ವಿದ್ಯಾರ್ಥಿ ಸಾವು
ಜೀವ ಉಳಿಸಿತು ಏರ್ ಬ್ಯಾಗ್
ಇನ್ನು ಇನ್ನೋವಾ ಕಾರಿನಲ್ಲಿ ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ನಾಲ್ವರು ವಿದೇಶಿಗರು ಜೋಗ ಸಲುವಾಗಿ ತೆರಳುತ್ತಿದ್ದರು. ಘಟನೆಯಲ್ಲಿ ಇವರಿಗೆಲ್ಲಾ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರು ಡಿಕ್ಕಿಯಾಗುತ್ತಲೇ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಇನ್ನೋವಾ ಕಾರಿನಲ್ಲಿದ್ದ ಯಾರಿಗೂ ಪ್ರಾಣಾಪಾಯವಾಗಿಲ್ಲ. ಕಾರಿನ ಡ್ರೈವರ್ ಸೇರಿ ಇವರಿಗೆಲ್ಲಾ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಅತಿವೇಗದ ಚಾಲನೆಯ ವೇಳೆ ಓವರ್ ಟೇಕ್ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















