ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಲೋಕಸಭೆ ಚುನಾವಣೆ ಫಲಿತಾಂಶದ #Lok Sabha Result ಮತ ಎಣಿಕೆ ಯಾವುದೇ ತೊಂದರೆ ಅಡ್ಡಿ ಇಲ್ಲದೇ ಸುಗಮವಾಗಿ ನಡೆಯಿತು.
ಇಂದು ಬೆಳಗ್ಗೆ ನಗರದ ಸಹ್ಯಾದ್ರಿ ಕಾಲೇಜ್ ನಲ್ಲಿ ಬೆಳಗ್ಗೆ ಸ್ಟ್ರಾಂಗ್ ರೂಂ ಬಾಗಿಲು ತೆರೆದು ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಸಲಾಯಿತು. ನಂತರ ಇವಿಎಂ ಮತಗಳ ಎಣಿಕೆ ಆರಂಭವಾಯಿತು. ಸಹ್ಯಾದ್ರಿ ಕಾಲೇಜ್ ಮಾರ್ಗದಲ್ಲಿ ರಸ್ತೆ ಬಂದ್ ಮಾಡಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.

Also read: ದ್ವೇಷದ ಅಪಪ್ರಚಾರ ಮಾಡಿದವರಿಗೆ ಜನ ಜಾಗ ತೋರಿಸಿದ್ದಾರೆ | ಬಿ.ವೈ. ರಾಘವೇಂದ್ರ ಟಾಂಗ್
ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರೆ ವಿರಳವಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಗೀತಾ ಶಿವರಾಜ್ ಕುಮಾರ್ ಹಿನ್ನಡೆ ಅನುಭವಿಸುತ್ತಿದ್ದಂತೆ ಸ್ಥಳದಿಂದ ತೆರಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post