ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತುಂಗಾ ನದಿ #Tunga river ಗಾಜನೂರು ಡ್ಯಾಮ್ ನ #Gajnur Dam ಎಲ್ಲಾ ಗೇಟ್ಗಳನ್ನು ತೆರೆದಿದ್ದು ಅಧಿಕ ಪ್ರಮಾಣದ ನೀರು ಹೊರಗೆ ಹರಿಸಿರುವುದರಿಂದ ನದಿ ಪಾತ್ರದ ಜನರಿಗೆ ಆತಂಕ ಶುರುವಾಗಿದೆ.
ನೆನ್ನೆ ರಾತ್ರಿಯಿಂದಲೆ ಪಾಲಿಕೆ ವತಿಯಿಂದ ಧ್ವನಿವರ್ಧಕದ ಮೂಲಕ ನದಿಪಾತ್ರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದ್ದು ನೀರಿನ ಹರಿವಿನಲ್ಲಿ ಇನ್ನೂ ಹೆಚ್ಚಳವಾದರೆ ಕೆಲವೊಂದು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.

Also read: ಪೂಜಾರಿ ಎಂದು ಹೆಸರು ಹೇಳಿಕೊಂಡು ಮಹಿಳೆ ಮೇಲೆ ಅತ್ಯಾಚಾರ: ಆರೋಪಿ ಬಂಧನ
ನಗರದ ರಿವರ್ ಫ್ರೆಂಟ್ ಭವನ, ಬಾಪೂಜಿನಗರ ಸರ್ಕಾರಿ ಶಾಲೆ, ರಾಮಣ್ಣ ಶ್ರೇಷ್ಟಿ ಪಾರ್ಕ್, ಸೀಗೆಹಟ್ಟಿ ಸರ್ಕಾರಿ ಶಾಲೆಯಲ್ಲಿ ಈಗಾಗಲೇ ಪಾಲಿಕೆ ವತಿಯಿಂದ ಕಾಳಜಿ ಕೇಂದ್ರವನ್ನು ತೆರೆಯಲಾಗಿದ್ದು, ನಿನ್ನೆ ರಾತ್ರಿ 15 ಕುಟುಂಬಗಳಿಗೆ ಆಹಾರ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಮೂಲಗಳು ತಿಳಿಸಿವೆ.

ಕೃಷ್ಣರಾಜೇಂದ್ರ ನೀರು ಸರಬರಾಜು ಘಟಕದಲ್ಲಿ ತೀವ್ರ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಳವಾದ ಕಾರಣ ಮೋಟಾರ್ ಮುಳುಗಿ ಹೋಗಿದ್ದು, ಎರಡು ಮೂರು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









Discussion about this post