ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಪ್ರಖ್ಯಾತ ಚಿನ್ನಾಭರಣ ಶೋರೂಂವೊಂದರಲ್ಲಿ ಚಿನ್ನ ಖರೀದಿ ಮಾಡುವ ನೆಪದಲ್ಲಿ ಇಬ್ಬರು ಮಹಿಳೆಯರು ಮೂರು ಚಿನ್ನ ಲಾಕೇಟ್’ಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಇತ್ತೀಚೆಗೆ ಘಟನೆ ನಡೆದಿದ್ದು, ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ದಾಖಲಾಗಿದೆ.
ಸುಮಾರು 27.600 ರೂ. ಮೌಲ್ಯದ ಮೂರು ಚಿನ್ನದ ಲಾಕೇಟ್’ಗಳನ್ನು ಕಳ್ಳಿಯರು ಕದ್ದಿರುವುದು ಬೆಳಕಿಗೆ ಬಂದಿದೆ.
Also read: ಭದ್ರಾವತಿ | ಕೇಶವಪುರದಲ್ಲಿ ಕಳ್ಳತನ | ಚಿನ್ನಾಭರಣ ಹೊತ್ತೊಯ್ದ ಕಳ್ಳರು
ಶೋರೂಂನವರು ಒಡವೆಗಳ ಸಂಖ್ಯೆ ತಪಾಸಣೆ ಮಾಡುವ ವೇಳೆ ವ್ಯತ್ಯಾಸ ಕಂಡುಬಂದಿದೆ. ಅನುಮಾನಗೊಂಡು ಸಿಸಿಟಿವಿ ತಪಾಸಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಅಕ್ಷಯ ತದಿಗೆಯಂದು ಗ್ರಾಹಕರ ಸಂಖ್ಯೆ ಹೆಚ್ಚಿದ್ದ ವೇಳೆ ಕಳ್ಳತನ ನಡೆದಿದೆ. ಇಬ್ಬರು ಮಹಿಳೆಯರು ಲಾಕೇಟ್ ಕಳ್ಳತನ ಮಾಡಿರುವುದು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ.
ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post