ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಎಲ್ಲಾ ಬಡಾವಣೆಗಳಲ್ಲೂ ಬೀದಿ ನಾಯಿ #Street Dog ಮತ್ತು ಹಂದಿಗಳ ಕಾಟ ಮಿತಿ ಮೀರಿದ್ದು, ಮಹಾನಗರ ಪಾಲಿಕೆಯ ಜಾಣ ಕುರುಡು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಲವಾರು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಪೋಟೋ ಸಹಿತ ವರದಿ ಬಂದರೂ ಸಹ ಮಹಾನಗರ ಪಾಲಿಕೆ ಕ್ರಮಕೈಗೊಳ್ಳುವಲ್ಲಿ ನಿರ್ಲಕ್ಷ್ಯ ಮಾಡುತ್ತಿದೆ. ಈಗಾಗಲೇ ರಾಜ್ಯದಲ್ಲೇ ಶಂಕಿತ ಡೆಂಗ್ಯೂ #Dengue ಪ್ರಕರಣದಲ್ಲಿ ಜಿಲ್ಲೆ ಮೂರನೇ ಸಾಲಿನಲ್ಲಿದ್ದು, ಸಾಂಕ್ರಾಮಿಕ ರೋಗ ಹರಡುವ ಮುನ್ನ ಪಾಲಿಕೆ ಎಚ್ಚೆತ್ತುಕೊಳ್ಳಬೇಕಾಗಿದೆ.
Also read: ಪತ್ರಿಕೋದ್ಯಮ ವೃತ್ತಿಪರ ಪ್ರಶಸ್ತಿಗಾಗಿ ನಾಮನಿರ್ದೇಶನಗಳಿಗೆ ಆಹ್ವಾನ
35 ವಾರ್ಡ್‍ಗಳಲ್ಲೂ ಸೊಳ್ಳೆಗಳ #Mosquito ಕಾಟ ಮಿತಿ ಮೀರಿದೆ. ಹಂದಿ ನಾಯಿಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಶಾಲಾ ಮಕ್ಕಳು ಓಡಾಡುವುದೇ ದುಸ್ತರವಾಗಿದೆ. ಅನೇಕ ಕಡೆ ಬೀದಿ ನಾಯಿಗಳು ದಾಳಿ ಮಾಡಿವೆ. ನಗರದ ದುರ್ಗಿಗುಡಿ, ಬಸವನಗುಡಿ,ನಂಜಪ್ಪ ಲೇಔಟ್, ವಿನೋಬನಗರದ ಆಟೋ ಕಾಂಪ್ಲೆಕ್ಸ್, ಬೆಂಕಿನಗರ, ಗೋಪಾಳಗೌಡ ಬಡಾವಣೆ, ಬೊಮ್ಮನಕಟ್ಟೆ, ಆರ್‍ಎಂಎಲ್ ನಗರ ಸೇರಿದಂತೆ ಅನೇಕ ಕಡೆ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post