ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಮಂಜುನಾಥ ಬಡಾವಣೆಯ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಯಿಂದ ಎರಡು ಬ್ಯಾಟರಿಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಮಂಜುನಾಥ ಬಡಾವಣೆಯ 80 ಅಡಿ ರಸ್ತೆಯಲ್ಲಿರುವ ಕೆಎಸ್’ಆರ್’ಟಿಸಿ ಡಿಪೋ ಬಳಿಯಲ್ಲಿ ನಿಲ್ಲಿಸಿದ್ದ ಲಾರಿಯಿಂದ ಎರಡು ಬ್ಯಾಟರಿಯನ್ನು ಕಳ್ಳತನ ಮಾಡಲಾಗಿದೆ. ನಿಹಾಲ್ ಪಾಷಾ ಎನ್ನುವವರಿಗೆ ಸೇರಿದ ಲಾರಿ ಇದಾಗಿದೆ ಎನ್ನಲಾಗಿದೆ.
Also read: ರೇಡಿಯೋ ಶಿವಮೊಗ್ಗ | ಆರ್’ಜೆ ಹಂಟ್ ಯಶಸ್ವಿ | ಭರ್ಜರಿ ರೆಸ್ಪಾನ್ಸ್
ಲಾರಿ ರಿಪೇರಿಯಿದ್ದ ಕಾರಣ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ರಾತ್ರಿ ಘಟನೆ ನಡೆದಿದ್ದು, ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















