ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟವು ಮಾರ್ಚ್ 1 ರಿಂದ ಜಾರಿಗೆ ಬರುವಂತೆ 1 ಕೆ.ಜಿ ತೂಕದ ನಂದಿನಿ ಮೊಸರು ಬಕೆಟ್ #Bucket Curd ಅನ್ನು ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಶಿಮುಲ್ #Shimul ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1 ಕೆ.ಜಿ ಬಕೆಟ್ ಮೊಸರು ದರ 95 ನಿಗದಿ ಮಾಡಲಾಗಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಪ್ರಾರಂಭಿಕ ಕೊಡುಗೆಯಾಗಿ ಪ್ರತಿ ಬಕೆಟ್‌ಗೆ 10 ರಿಯಾಯಿತಿ ನೀಡಿ 85 ರೂಗಳಿಗೆ ಲಭ್ಯವಾಗಲಿದೆ. ಶಿಮುಲ್ ಒಕ್ಕೂಟವು ಈಗಾಗಲೇ 200 ಗ್ರಾಂ, 500 ಗ್ರಾಂ ಹಾಗೂ 5 ಕೆ.ಜಿ ಮತ್ತು 10 ಕೆ.ಜಿ ಬಕೆಟ್‌ಗಳಲ್ಲಿ ಮೊಸರನ್ನು ಮಾರಾಟ ಮಾಡುತ್ತಿದ್ದು, ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸರಾಸರಿ 66 ಸಾವಿರ ಕೆ.ಜಿ ಮೊಸರನ್ನು ಮಾರಾಟವಾಗುತ್ತಿದೆ.
ತನ್ನ ವ್ಯಾಪ್ತಿಯಲ್ಲಿ 1865 ಹಾಲಿನ ಡೀಲರ್‌ಗಳು, 195 ಫ್ರಾಂಚೈಸಿ ಪಾರ್ಲರ್‌ಗಳು ಹಾಗೂ 52 ಸ್ವಂತ ಪಾರ್ಲರ್‌ಗಳನ್ನು ಹೊಂದಿದ್ದು, ಪ್ರತಿನಿತ್ಯ 2.76 ಲಕ್ಷ ಲೀಟರ್ ಹಾಲು ಮತ್ತು ಸರಾಸರಿ 66 ಸಾವಿರ ಕೆ.ಜಿ ಮೊಸರನ್ನು ಮಾರಾಟ ಮಾಡಲಾಗುತ್ತಿದೆ. ಇದರೊಂದಿಗೆ 150ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ಹಾಗೂ ನಂದಿನಿ ಐಸ್‌ಕ್ರೀಮ್ ಸಹ ಮಾರಾಟ ಮಾಡಲಾಗುತ್ತಿದೆ.
ತನ್ನ ವ್ಯಾಪ್ತಿಯಲ್ಲಿ ಬರುವ 1353 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿನಿತ್ಯ2 ಪಾಳಿಗಳಲ್ಲಿ ಸರಾಸರಿ 7.60 ಲಕ್ಷ ಕೆ.ಜಿ ಹಾಲನ್ನು ಸಂಗ್ರಹಿಸುತ್ತಿದೆ. ಈ ಹಾಲನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ಸಂಸ್ಕರಿಸಿ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















