ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿ ಮಳೆ ಕಣ್ಣಮುಚ್ಚಾಲೆ ಆಡುತ್ತಿದ್ದರೂ ಸಹ ಕೆಲವೊಂದು ಭಾಗದಲ್ಲಿ ಉತ್ತಮ ಮಳೆಯೂ ಸಹ ಆಗುತ್ತಿದ್ದು, ಮಲೆನಾಡು ಜೀವಕಳೆ ತುಂಬಿಕೊಳ್ಳುತ್ತಿದೆ.
ಭದ್ರಾ ಜಲಾಶಯ:
ಭದ್ರಾ ಜಲಾನಯನ #Bhadra Dam ಪ್ರದೇಶದಲ್ಲಿ ಮಳೆ ನಿನ್ನೆ ಕೊಂಚ ಕಡಿಮೆಯಾಗಿದ್ದರೂ ಸಹ ಅಣೆಕಟ್ಟೆಯಲ್ಲಿ ಒಂದೇ ದಿನ 1 ಅಡಿಗಳಷ್ಟು ನೀರು ಏರಿಕೆಯಾಗಿದೆ.
ನಿನ್ನೆ ಶುಕ್ರವಾರ 8655 ಕ್ಯೂಸೆಕ್ಸ್ ಒಳ ಹರಿವು ಇತ್ತು. ಇವತ್ತು 6376 ಕ್ಯೂಸೆಕ್ಸ್ ಒಳ ಹರಿವು ಇದೆ. ಇವತ್ತಿನ ಜಲಾಶಯದ ನೀರಿನ ಮಟ್ಟ 123.4 ಅಡಿಗೆ ಏರಿಕೆಯಾಗಿದೆ. 346 ಕ್ಯೂಸೆಕ್ಸ್ ಹೊರ ಹರಿವು ಇದೆ.
ಶುಕ್ರವಾರಕ್ಕೆ ಹೋಲಿಸಿದರೆ ಸುಮಾರು 2 ಸಾವಿರ ಕ್ಯೂಸೆಕ್ಸ್ ಒಳ ಹರಿವು ಕಡಿಮೆಯಾಗಿದೆ. 186 ಅಡಿಯ ಎತ್ತರದ ಜಲಾಶಯದಲ್ಲಿ ಭದ್ರ ನೀರು 123.4 ಅಡಿ ಸಂಗ್ರಹವಾಗಿದೆ.
ಲಿಂಗನಮಕ್ಕಿ ಜಲಾಶಯ
ಇದೇ ವೇಳೆ ಲಿಂಗನಮಕ್ಕಿ ಜಲಾಶಯಕ್ಕೆ #Linganamakki Dam ನಿನ್ನೆ 9184 ಕ್ಯೂಸೆಕ್ಸ್ ನೀರು ಹರಿದು ಬಂದಿದೆ.
Also read: ಹಾವೇರಿ ಅಪಘಾತ | ರಾತ್ರಿ ಮೃತ 9 ಮಂದಿ ಅಂತ್ಯಸಂಸ್ಕಾರ | ಅಂತಿಮ ದರ್ಶನ ಪಡೆದ ಸಂಸದರು
1818 ಅಡಿ ಎತ್ತರವಿರುವ ಲಿಂಗನಮಕ್ಕಿ ಜಲಾಶಯದಲ್ಲಿ 1749 ಅಡಿ ನೀರು ಸಂಗ್ರಹವಾಗಿದೆ. 2348.5 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಈ ದಿನಾಂಕದAದು 1740 ಅಡಿ ನೀರು ಸಂಗ್ರಹವಾಗಿತ್ತು.
ತುಂಗಾ ಜಲಾಶಯ
ತುಂಗೆಯ #Tunga ಒಳಹರಿವು ಹೆಚ್ಚಿರುವುದರಿಂದ 6 ಗೇಟ್ ತೆರೆದು ನದಿಗೆ ಜಲಾಶಯದಿಂದ ನಿನ್ನೆ ನೀರು ಹರಿಸಲಾಗುತ್ತಿತ್ತು. ಆದರೆ ಇಂದು 9157 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಅಷ್ಟೆ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಇಂದು ಮೂರು ಗೇಟಿನಿಂದ ನದಿಗೆ ನೀರು ಹರಿಸಲಾಗುತ್ತಿದ್ದು, ನಿನ್ನೆ 11 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿದು ಬಂದಿದ್ದರಿAದ ಜಲಾಶಯದ 6 ಗೇಟ್ ಓಪನ್ ಮಾಡಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















