ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀಕೃಷ್ಣ ಜನ್ಮಾಷ್ಟಮಿಯ #Shri Krishna Janmashtami ಅಂಗವಾಗಿ ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ ಶ್ರೀಕೃಷ್ಣನ ಜೀವನ ಸಂದೇಶ ಸಾರುವ ವಿಭಿನ್ನ ಕಾರ್ಯಕ್ರಮಗಳನ್ನು ಆಚರಿಸಲಾಯಿತು.
ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಮಕ್ಕಳಿಗೆ ಶ್ರೀ ಕೃಷ್ಣನ ಬಾಲ್ಯದ ಕಥೆಗಳು ಮತ್ತು ಅವರ ಜೀವನದ ಮೌಲ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Also read: ಭಾರತದ ರೈಲುಗಳ ಮೇಲೆ ದಾಳಿಗೆ ಸ್ಲೀಪರ್ ಸೆಲ್’ಗಳಿಗೆ ಉಗ್ರ ಫರ್ಹತುಲ್ಲಾ ಸೂಚನೆ!
ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೆಯ ವೇಷದಲ್ಲಿ ನೃತ್ಯ ಪ್ರದರ್ಶಿಸಿ, ಅತಿಥಿಗಳ ಪ್ರಶಂಸೆಯನ್ನು ಪಡೆದರು. ಮಕ್ಕಳು ಹಬ್ಬದ ಸಂಭ್ರಮದಲ್ಲಿ ತಮಗೆ ಇಷ್ಟವಾದ ಕೃಷ್ಣನ ಪಾತ್ರಗಳಲ್ಲಿ ತೊಡಗಿದ್ದು, ಪೋಷಕರು ಸಹ ಯಶೋಧೆ ಪಾತ್ರವನ್ನು ಧರಿಸಿ ಮಕ್ಕಳೊಂದಿಗೆ ಪಾಲ್ಗೊಂಡರು.
ಕಾರ್ಯಕ್ರಮದ ಭಾಗವಾಗಿ ಪ್ರಾಂಶುಪಾಲರು ಮಕ್ಕಳಿಗೆ ಶ್ರೀ ಕೃಷ್ಣನ ಸತ್ಕಾರ್ಯಗಳು, ಧರ್ಮ, ಮತ್ತು ಪ್ರೀತಿಯ ಮಹತ್ವವನ್ನು ವಿವರಿಸಿದರು. ಅಂತಿಮವಾಗಿ, ಕಾರ್ಯಕ್ರಮವು ಶಾಲೆಯ ಸಾಂಸ್ಕೃತಿಕ ಸಮಿತಿಯಿಂದ ಭಜನೆ, ಕೀರ್ತನೆ ಮತ್ತು ಪ್ರಸಾದ ವಿತರಣೆ ಮಾಡಲಾಯಿತು.
ಶಾಲೆಯ ಪ್ರಾಂಶುಪಾಲರಾದ ಪ್ರಿಯದರ್ಶಿನಿ, ಶಾಲೆಯ ಸಿಒಒ ಸುಮಂತ್, ಶಿಕ್ಷಕರು ವಿದ್ಯಾರ್ಥಿಗಳು ಆಡಳಿತ ಮತ್ತು ಆಡಳಿಕೇತರ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post