ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ದುಮ್ಮಳ್ಳಿಯಲ್ಲಿ ಜಮೀನೊಂದರ ವಿಚಾರದ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ಇಲ್ಲಿನ ನಿವಾಸಿ, ಬಿಜೆಪಿ ಕಾರ್ಯಕರ್ತ ಶೇಷನಾಯ್ಕ(28) ಎಂದು ಗುರುತಿಸಲಾಗಿದೆ.
ಶೇಷನಾಯ್ಕ ಹಾಗೂ ಮಂಜನಾಯ್ಕ ಎಂಬವರು ಅಕ್ಕಪಕ್ಕದಲ್ಲಿ ಜಮೀನು ಹೊಂದಿದವರು. ಇವರ ನಡುವೆ ಜಮೀನಿನ ವಿಚಾರದಲ್ಲಿ ವ್ಯಾಜ್ಯವಿತ್ತು. ಈ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿತ್ತು. ಕೋರ್ಟ್’ನಲ್ಲಿ ಜಮೀನು ಶೇಷನಾಯ್ಕನ ಪರವಾಗಿ ಆಗುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ.
Also read: ಶಿವಮೊಗ್ಗ | ಬೆಳ್ಳಂಬೆಳಗ್ಗೆ ಗುಂಡಿನ ಸದ್ದು | ರೌಡಿ ಶೀಟರ್ ಶೋಯೇಬ್ ಕಾಲಿಗೆ ಪೊಲೀಸ್ ಗುಂಡು
ಈ ಕಾರಣಕ್ಕೆ ಅಸಮಾಧಾನಗೊಂಡಿದ್ದ ಮಂಜಾನಾಯ್ಕನ ಪುತ್ರ ಅಖಿಲೇಶ್ ನಾಯ್ಕ ಇವತ್ತು ಜಮೀನಿನಲ್ಲಿ ಸತೀಶ್ ಕೆಲಸ ಮಾಡಲು ಬಂದಿದ್ದ ವೇಳೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಖಚಿತ ಮಾಹಿತಿ ತಿಳಿದುಬರಬೇಕಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲೇಶ್ ನಾಯ್ಕನನ್ನು ಬಂಧಿಸಲಾಗಿದೆ. ಸತೀಶ್ ನಾಯ್ಕ ತನ್ನ ಜಮೀನಿನಲ್ಲಿ ಕೆಲಸ ಮಾಡುವಾಗ ಜಮೀನು ವಿಚಾರಕ್ಕೆ ಗಲಾಟೆ ತೆಗೆದು ಅಖಿಲೇಶ್ ಹಾಗೂ ಆತನ ಕಡೆಯವರು ಹ¯್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post