ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ತಾವರೆ ಚಟ್ನಳ್ಳಿ ಬಳಿ ನಡೆದಿದೆ.
ಘಟನೆಯಲ್ಲಿ ಗಾನವಿ (17) ಎಂಬ ವಿದ್ಯಾರ್ಥಿನಿ ಮೃತಪಟ್ಟಿದ್ದು, ಆಕೆಯ ತಾಯಿ ಮತ್ತು ಅಜ್ಜಿ ಗಾಯಗೊಂಡಿದ್ದಾರೆ. ಚಟ್ನಳ್ಳಿಯ ಪೇಸ್ ಕಾಲೇಜಿನ ವಿದ್ಯಾರ್ಥಿನಿ ಗಾನವಿ ತಾವರೆ ಕಾಲೇಜು ಮುಂಭಾಗದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಗಾನವಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಅಜ್ಜಂಪುರ ನಿವಾಸಿಯಾಗಿದ್ದು, ಗಾನವಿಗೆ ಇಂದು ರಜೆ ಇದ್ದ ಕಾರಣ ಆಕೆಯ ತಾಯಿ ಹಾಗೂ ಅಜ್ಜಿ ಸಂಬಂಧಿಕರ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಕಾಲೇಜಿಗೆ ಮರಳುತ್ತಿದ್ದಾಗ ಗಾನವಿ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಕಾಲೇಜಿಗೆ ಸೇರಬೇಕಿದ್ದ ಗಾನವಿ ಸಾವನ್ನಪ್ಪಿದ್ದಾಳೆ.
Also read: ಅಗತ್ಯ ಕೌಶಲ್ಯತೆ ಬೆಳೆಸಿಕೊಂಡು, ದೇಶದ ಆರ್ಥಿಕ ವೃದ್ದಿಗೆ ಕೊಡುಗೆ ನೀಡಿ | ವಿಟಿಯು ಕುಲಸಚಿವ ರಂಗಸ್ವಾಮಿ ಕರೆ
ವೇಗವಾಗಿ ಬಂದ ಕ್ಯಾಂಟರ್ ಆಟೋಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋ ಎಡಕ್ಕೆ ಬಿದ್ದಿದೆ. ಆಟೋದ ಎಡಭಾಗದಲ್ಲಿದ್ದ ಗಾನವಿ ಮೊದಲು ನೆಲಕ್ಕೆ ಬಿದ್ದಿದ್ದಾಳೆ. ಇದರಿಂದ ಆಕೆಯ ಹೊಟ್ಟೆಗೆ ತೀವ್ರ ಪೆಟ್ಟಾಗಿದೆ. ಇದರಿಂದ ಗಾನವಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾಳೆ. ಆಕೆಯ ತಾಯಿ ಮತ್ತು ಅಜ್ಜಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚೀಲೂರಿನಲ್ಲಿ ಹಿಟ್ ಅಂಡ್ ರನ್ ಮಾಡಿದ ಕ್ಯಾಂಟರ್ ಚಾಲಕನನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಪಘಾತದ ನಂತರ ನಿಲ್ಲಿಸದೆ ಓಡಿಹೋದ ಕ್ಯಾಂಟರ್ ಅನ್ನು ಸ್ಥಳೀಯರು ಹಿಂಬಾಲಿಸಿದಾಗ, ಕ್ಯಾಂಟರ್ ಚಾಲಕ ಅವರ ಕಾರಿಗೆ ಡಿಕ್ಕಿ ಹೊಡೆಯಲು ಪ್ರಯತ್ನಿಸಿದರು. ಈ ಕುರಿತು ಶಿವಮೊಗ್ಗದ ಪೂರ್ವ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post