ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ #University of Agriculture and Horticulture ಕಲಿತ ಓರ್ವ ಅಡುಗೆ ಭಟ್ಟರ ಪುತ್ರಿ ಹಾಗೂ ಓರ್ವ ಕೃಷಿಕರ ಪುತ್ರಿ ಚಿನ್ನದ ಪದಕ ಪಡೆಯುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಅಡುಗೆ ಭಟ್ಟರ ಪುತ್ರಿಗೆ 4 ಚಿನ್ನದ ಪದಕ
ಶಿವಮೊಗ್ಗ ರವೀಂದ್ರನಗರದ ಗಣಪತಿ ದೇವಸ್ಥಾನದ #Shivamogga Ravindra Nagara Ganapati Temple ಅಡುಗೆ ಭಟ್ಟ ಸುರೇಶ್-ಸುಧಾ ದಂಪತಿ ಪುತ್ರಿ ಎನ್.ಎಸ್. ಸಂಜೀತಾ ಅವರು 2022-23ನೇ ಸಾಲಿನ ನಾಲ್ಕು ಪದಕಕ್ಕೆ ಮುತ್ತಿಟ್ಟರು.
ಕಾಶಿಪುರದ ಸಂಜೀತಾ ಅವರು ಬೆಂಗಳೂರಿನ ಜಿಕೆವಿಕೆಯ ಚಿಂತಾಮಣಿ ಕ್ಯಾಂಪಸ್ ನಲ್ಲಿ ಕೃಷಿ ಕೀಟ ಶಾಸ್ತ್ರದಲ್ಲಿ ಎಂಎಸ್ಸಿ ಮಾಡುತ್ತಿದ್ದಾರೆ. ಮುಂದೆ ಪಿಎಚ್’ಡಿ ಮಾಡುವ ಗುರಿ ಹೊಂದಿದ್ದಾರೆ. ರೈತರಿಗೆ ಒಳ್ಳೆಯದನ್ನು ಮಾಡುವ ಗುರಿ ಹೊಂದಿದ್ದಾರೆ.
Also read: 31 ಚಿನ್ನದ ಪದಕ, 25 ಪಿಎಚ್‌ಡಿ ಪ್ರದಾನ | ಕೃಷಿ ವಿವಿ ಸಾಧಕ ವಿದ್ಯಾರ್ಥಿಗಳಿವರು
ಕೃಷಿಕರ ಮಗಳಿಗೆ ಮೂರು ಚಿನ್ನದ ಪದಕ
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಗೌಡರಗೆರೆಯ ಜಿ.ಎಸ್. ಪೂರ್ಣಿಮಾ 2023-24ನೇ ಸಾಲಿನಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ.
ಜಿ.ಪಿ. ಹನುಮಂತ, ಎಲ್.ಆರ್. ರಾಜೇಶ್ವರಿ ದಂಪತಿ ಪುತ್ರಿಯಾಗಿದ್ದು ಜೆನಿಟಿಕ್ ಆ್ಯಂಡ್ ಪ್ಲ್ಯಾನ್ ಬೀಡಿಂಗ್ ವಿಷಯದಲ್ಲಿ ಎಂಎಸ್ಸಿ ಮಾಡುತ್ತಿದ್ದಾರೆ.
ಸಂಶೋಧನೆಯಲ್ಲಿ ಮುಂದುವರಿಯುವ ಇಂಗಿತವನ್ನು ವ್ಯಕ್ತಪಡಿಸಿದರು. ಇತ್ತೀಚೆಗೆ ಒಂದು ತಿಂಗಳು ಸಂಶೋಧನೆಗಾಗಿ ಬ್ಯಾಂಕಾಕ್ ಗೂ ಹೋಗಿ ಅಧ್ಯಯನ ಮಾಡಿಕೊಂಡು ಬಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post