ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಳದಿ ಶಿವಪ್ಪನಾಯ್ಕ ಕೃಷಿ ವಿಶ್ವವಿದ್ಯಾಲಯವನ್ನು ದೇಶದ 10ನೇ ರ‍್ಯಾಂಕಿಂಗ್‌ನೊಳಗೆ ತರುವ ಪ್ರಯತ್ನ ನಮ್ಮದಾಗಿದೆ. ಶಿಕ್ಷಣ, ಸಂಶೋಧನೆ, ವಿಸ್ತರಣೆ ನೋಡಿ ದೇಶದ 72 ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಶಿವಮೊಗ್ಗ ವಿವಿ ಈಗಾಗಲೇ 32ನೇ ರ‍್ಯಾಂಕಿಂಗ್ ಪಡೆದಿದ್ದು, ದೇಶದೊಳಗೆ 10ರೊಳಗಿನ ರ‍್ಯಾಂಕಿಂಗ್‌ಗೆ ಯತ್ನಿಸಲಾಗುವುದು ಎಂದು ಕೃಷಿ ವಿವಿಯ ಕುಲಪತಿ ಡಾ.ಬಿ.ಸಿ.ಜಗದೀಶ್ ಇಂದಿಲ್ಲಿ ತಿಳಿಸಿದರು.
ಅವರು ಇಂದು ಬೆಳಗ್ಗೆ ಪ್ರೆಸ್‌ಟ್ರಸ್ಟ್‌ನಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಮಾತಾನಾಡುತ್ತಾ, ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ಅಗತ್ಯವಿರುವ ಅಡಿಕೆ ಎಲೆಚುಕ್ಕೆರೋಗಕ್ಕೆ ಪರಿಹಾರ ಕಂಡುಹಿಡಿಯಲು 8 ವಿದ್ಯಾರ್ಥಿಗಳೊಂದಿಗೆ ಇಬ್ಬರು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಎಲೆಚುಕ್ಕಿರೋಗ ಶೀತದ ಪ್ರಮಾಣ ಹಾಗೂ ನಿರಂತರ ಮಳೆಯಿಂದ ಉಂಟಾಗುತ್ತದೆ. ಗಾಳಿಯ ಮೂಲಕ ಹರಡುವ ಈ ರೋಗದ ವೈರಾಣುಗಳು ಸಾಯುವುದಿಲ್ಲ. ಮತ್ತೆ ಮುಂದಿನ ದಿನದ ಮಳೆಗಾಲದ ಅವಧಿಯಲ್ಲಿ ಉತ್ಪತ್ತಿಯಾಗುತ್ತವೆ. ಇದಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ವಿವಿ ವ್ಯಾಪ್ತಿಯ ಹಲವು ಮಹತ್ತರ ಕಾರ್ಯಕ್ರಮಗಳ ಬಗ್ಗೆ ಹಾಗೂ ಎಲ್ಲಾ ಬಗೆಯ ಸಸ್ಯಗಳು, ಬೀಜಗಳನ್ನು ರೈತರಿಗೆ ಕೊಡುವ ನಿಟ್ಟಿನಲ್ಲಿ ಪ್ರಯತ್ನ ದೊಡ್ಡದಾಗಿದೆ. ಜೇನುತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದ್ದು, ನಮ್ಮಲ್ಲಿ ಅದಕೋಸ್ಕರ 3 ಕ್ಯಾಂಪಸ್‌ಗಳಲ್ಲಿ ಇಂತಹ ಕಾರ್ಯ ನಡೆಯುತ್ತಿದೆ ಎಂದರು.
ಸದ್ಯದಲ್ಲೆ ವಿವಿಯಲ್ಲಿ ಹೆಲ್ಪ್‌ಲೈನ್ ಸ್ಥಾಪನೆ
ರೈತರು ನೇರವಾಗಿ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕೃಷಿ ವಿವಿಯ ತಜ್ಞರೊಂದಿಗೆ ಸಂಪರ್ಕಿಸಿ ಮಾಹಿತಿ ಪಡೆಯಲು ಸದ್ಯದಲ್ಲೆ ಹೆಲ್ಪ್‌ಲೈನ್ ಸ್ಥಾಪಿಸಲಾಗುತ್ತದೆ.
-ಡಾ.ಜಗದೀಶ್, ಕುಲಪತಿ
ರೈತರೊಂದಿಗೆ ಒಡನಾಟ ಇಟ್ಟುಕೊಳ್ಳುವ ಜೊತೆಗೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮೂಲಕ ರೈತ ಸಂಪರ್ಕಕೇಂದ್ರದ ಜೊತೆಗೆ ವಿಶ್ವವಿದ್ಯಾಲಯದ ಸಂಶೋಧನೆಗಳನ್ನು ಪ್ರಯೋಗಗಳನ್ನು ರೈತರಿಗೆ ಕೊಡುವ ಪ್ರಯತ್ನ ನಡೆಯುತ್ತದೆ. ಪ್ರತಿವಾರಕ್ಕೊಮ್ಮೆ ವಿದ್ಯಾರ್ಥಿಗಳು ರೈತರೊಂದಿಗೆ ಸಂವಾದಿಸುವ, ಪ್ರತಿವಾರ ರೈತರೊಂದಿಗೆ ವಿವಿಯ ವಿಜ್ಞಾನಿಗಳು, ತಂಜ್ಞರು ಭೇಟಿ ಮಾಡುವುದು ಮತ್ತು ಪ್ರತಿವಾರ ತರಬೇತಿ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
Also read: ಶಾಸಕ ಹರೀಶ್ ಪೂಂಜಾ ಮೇಲೆ ತಲ್ವಾರ್’ನಿಂದ ದಾಳಿ ಯತ್ನ: ತಪ್ಪಿದ ಅನಾಹುತ
ಸಂವಾದಲ್ಲಿ ಟಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಉಪಸ್ಥಿತರಿದ್ದರು. ಹೊನ್ನಾಳಿ ಚಂದ್ರಶೇಖರ್ ಸ್ವಾಗತಿಸಿ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post