ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ರಂಗಾಯಣದ ವತಿಯಿಂದ ಏ.12 ರಿಂದ ಮೇ.4 ರವರೆಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಮಕ್ಕಳಿಗಾಗಿ “ಚಿಣ್ಣರ ಸಿಹಿಮೊಗೆ” ಎಂಬ ರಂಗತರಬೇತಿ ಶಿಬಿರವನ್ನು #Rangatarabethi Shibira ಆಯೋಜಿಸಲಾಗಿದೆ.
ಶಿಬಿರದಲ್ಲಿ ಕಥೆ ಹೇಳುವುದು, ಬಣ್ಣಗಳ ಆಟ, ರಂಗಾಟ, ನಾಟಕ, ಮೈಮ್, ಜನಪದಗೀತೆ, ಜನಪದನೃತ್ಯ, ಜನಪದ ಆಟ, ಮಣ್ಣಿನ ಆಟ, ಮ್ಯಾಜಿಕ್ ಷೋ, ಮಕ್ಕಳ ಸಂತೆ, ರಂಗಜಾಥಾ, ಮುಖವಾಡ ತಯಾರಿ, ಚಿತ್ರಕಲೆ, ಮಕ್ಕಳ ಸಿನಿಮಾ, ನಾಟಕ ವಿಕ್ಷಣೆ, ಪ್ರವಾಸ, ಮಡಿಕೆ ತಯಾರಿ, ಪರಿಸರದ ಸಂಬಂಧಿಸಿದ ಪೂರಕ ಕಲೆಯನ್ನು ಕಲಿಸಲಾಗುವುದು. ಶಿಬಿರದ ಕೊನೆಯ ಮೂರು ದಿನಗಳು ಶಿಬಿರಾರ್ಥಿಗಳ ನಾಟಕ, ಕಲೆಯನ್ನು ರಂಗಾಯಣ “ ಚಿಣ್ಣರ ಸಿಹಿಮೊಗೆ” ರಂಗೋತ್ಸವದಲ್ಲಿ ಪ್ರದರ್ಶಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ರಂಗಾಯಣ ಕಚೇರಿ ದೂ.ಸಂ:08182256353 ನ್ನು ಸಂಪರ್ಕಿಸಬಹುದು ಎಂದು ರಂಗಾಯಣ ನಿರ್ದೇಶಕರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post