ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆಯಲ್ಲಿ #Shivamogga Corporation ವಿವಿಧ ಇಲಾಖಾವಾರು ಪ್ರಗತಿಪರಿಶೀಲನಾ ಸಭೆಯನ್ನು ಶಾಸಕ ಬಿ.ಎಸ್. ಚನ್ನಬಸಪ್ಪ #MLA Channabasappa ನಡೆಸಿದರು.
ವಿಧಾನ ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಶಾಸಕರು ಪ್ರಗತಿ ಪರಿಶೀಲನಾ ಸಭೆಯನ್ನುನಡೆಸಿದ್ದು, ಹಲವು ವಿಚಾರಗಳನ್ನು ಚರ್ಚಿಸಿದರು.
Also read: Today India is close to 100 percent electrification of railway lines: PM Modi
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಮತ್ತು ಡಾ. ಧನಂಜಯ್ ಸರ್ಜಿ, ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ, ಉಪ ಆಯುಕ್ತರು( ಆಡಳಿತ) ತುಷಾರ್ ಹೊಸೂರ್ ಸೇರಿದಂತೆ ಇಲಾಖಾವಾರು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಏನೆಲ್ಲಾ ಚರ್ಚೆಯಾಯ್ತು?
- ಇ-ಆಸ್ತಿ ಪ್ರಗತಿಯ ಕುರಿತು ಚರ್ಚೆ
- ಶಿವಮೊಗ್ಗ ನಗರದ ವಿದ್ಯುತ್ ವಿಭಾಗಗಳ ಸೌಕರ್ಯಗಳ ಬಗ್ಗೆ ಚರ್ಚೆ
- ಆರೋಗ್ಯ ವಿಭಾಗಕ್ಕೆ ಸಂಬAಧಿಸಿದAತೆ ಆರೋಗ್ಯ ವಿಭಾಗದ ಸೌಕರ್ಯಗಳ ಕುರಿತು ಚರ್ಚೆ
- ಸ್ಮಾರ್ಟ್ ಸಿಟಿ ಯೋಜನೆ ಮತ್ತು ಮಹಾನಗರ ಪಾಲಿಕೆಗೆ ಹಸ್ತಾಂತರದ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ
- ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯ ಬಗ್ಗೆ ಅನೇಕ ವಿಷಯಗಳ ಚರ್ಚೆ
- ಮಹಾನಗರ ಪಾಲಿಕೆ ವ್ಯಾಪ್ತಿಯ ಸಿವಿಲ್ ಕಾಮಗಾರಿಗಳ ಪ್ರಗತಿ ಪರಿಶೀಲನ ಬಗ್ಗೆ ಚರ್ಚೆ
- ಸರ್ಕಾರದ ಯೋಜನೆಗಳು ಮತ್ತು ಮುಜುರಾಯಿ ಕಾಮಗಾರಿಗಳಿಗೆ ನಿರಾಕ್ಷೇಪಣಾ ಪತ್ರ ನೀಡುವ ಕುರಿತು ಚರ್ಚೆ
- ಗಾಂಧಿ ಪಾರ್ಕ್ ಮತ್ತು ಶಿವಮೊಗ್ಗ ನಗರದ ಇತ್ಯಾದಿ ಉದ್ಯಾನವನಗಳಿಗೆ ಅಭಿವೃದ್ಧಿಯ ಬಗ್ಗೆ ಚರ್ಚೆ
- ಶಾಲಾ-ಕಾಲೇಜುಗಳ ಆಸ್ತಿಗಳನ್ನು ಖಾತೆ ದಾಖಲಿಸುವ ಬಗ್ಗೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳ ಅಭಿವೃದ್ಧಿ ಯೋಜನೆ ಬಗ್ಗೆ ಚರ್ಚೆ
- ಕೊಳಗೇರಿಗಳ ಮೂಲ ಸೌಕರ್ಯಗಳ ಅಭಿವೃದ್ಧಿಯ ಬಗ್ಗೆ ಚರ್ಚೆ
- ಮಹಾನಗರ ಪಾಲಿಕೆಯ ಮಳಿಗೆಗಳು, ಬಟ್ಟೆ ಮಾರ್ಕೆಟ್, ಮೈದಾನದ ಸಂಬAಧಿಸಿದ ವಿಷಯಗಳ ಬಗ್ಗೆ ಚರ್ಚೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post