ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನಲ್ಲೇ ಮೊಟ್ಟ ಮೊದಲ ಬಾರಿಗೆ ನಿರ್ಮಾಣವಾದರೂ ಆರಂಭವಾಗದೇ 3 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಬಹುಮಹಡಿ ಕಟ್ಟಡದ ಪಾರ್ಕಿಂಗ್ #Mult Storage Parking ವ್ಯವಸ್ಥೆ ಆರಂಭಕ್ಕೆ ದಿನಾಂಕ ನಿದಗಿಯಾಗಿದೆ.
ಬಹುಮಹಡಿ ಕಟ್ಟಡದಲ್ಲಿ ದ್ವಿಚಕ್ರ, ಕಾರು ಮತ್ತು ತ್ರಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಆರಂಭಗೊಂಡಿದೆ. ಆಗಸ್ಟ್ 1 ರಿಂದ ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಆರಂಭಗೊಳ್ಳಲಿದೆ.
ಕಳೆದ 6 ತಿಂಗಳ ಹಿಂದಷ್ಟೆ ಬಹುಮಹಡಿ ಕಟ್ಟಡ ಸ್ಮಾರ್ಟ್ ಸಿಟಿ ಯಿಂದ ನಗರ ಪಾಲಿಕೆಗೆ ಹಸ್ತಾಂತರಗೊAಡಿದೆ. ಅದಾದ ನಂತರ ಇ ಟೆಂಡರ್ ನಡೆದಿದ್ದು ಶಿವಮೊಗ್ಗದವರಿಗೆ ಈ ಪಾರ್ಕಿಂಗ್ ಟೆಂಡರ್ ಆಗಿದೆ. ಈಗ ಆಗಸ್ಟ್ 1 ರಿಂದ ಪಾರ್ಕಿಂಗ್ ವ್ಯವಸ್ಥೆ ಆರಂಭಗೊಳ್ಳಲಿದೆ. ಆದರೆ, ಮಳಿಗೆ ಆರಂಭ ಯಾವಾಗ ಎಂಬುದು ತಿಳಿದಿಲ್ಲ.
ಪಾರ್ಕಿಂಗ್ ದರ ಎಷ್ಟು?
ಮಾಹಿತಿಯಂತೆ, ದ್ವಿಚಕ್ರ ವಾಹನಗಳಿಗೆ ಮೊದಲ ಎರಡು ಗಂಟೆಗೆ 10 ರೂ. ನಿಗದಿಯಾದರೆ, ಕಾರುಗಳಿಗೆ 20 ರೂ. ನಿಗದಿಯಾಗಿದೆ. ಎರಡು ಗಂಟೆಯ ನಂತರ ಕಾರುಗಳಿಗೆ ಪ್ರತಿ ಒಂದು ಗಂಟೆಗೆ 10 ರೂ. ನಿಗದಿಯಾಗಿದ್ದು, ದ್ವಿಚಕ್ರ ವಾಹನಗಳಿಗೆ 5 ರೂ. ನಿಗದಿ ಪಡಿಸಲಾಗಿದೆ.
ಬೇಸ್ಮೆಂಟ್’ನಲ್ಲಿ 80 ದ್ವಿಚಕ್ರವಾಹನಗಳನ್ನು ಪಾರ್ಕ್ ಮಾಡಬಹುದಾಗಿದೆ. ಕಟ್ಟಡದ ಎರಡು ಮಹಡಿಗಳಲ್ಲಿ 172 ಕಾರುಗಳನ್ನು ಪಾರ್ಕ್ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post