ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಾರನಹಳ್ಳಿಯ ಶ್ರೀಕ್ಷೇತ್ರ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಚೌಕಿಮಠದಲ್ಲಿ ಜ. 22ರಿಂದ 26ರವರೆಗೆ ಹರಪುರಾಧೀಶನ ದೀಪೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಶ್ರೀ ನೀಲಕಂಠ ಮಹಾಸ್ವಾಮಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜ.21ರಿಂದ 26ರವರೆಗೆ ಬೆಳಗ್ಗೆ 6ರಿಂದ 9 ಗಂಟೆಯವರೆಗೆ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಮಹಾರುದ್ರಾಭಿಷೇಕ, ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಮುತ್ತೆöÊದೆಯರಿಗೆ ಉಡಿ ತುಂಬುವುದು ಕುಂಬೋತ್ಸವ, ಬಾಗಿನ ನೀಡಲಾಗುವುದು. ಪ್ರತಿದಿನ ಸಂಜೆ 7 ಗಂಟೆಗೆ ಮಾನ್ವಿ ತಾಲೂಕಿನ ಸುಕ್ಷೇತ್ರ ಬೆಟ್ಟದೂರಿನ ಶ್ರೀ ಪ್ರಭುಲಿಂಗೇಶ್ವರ ಮಠದ ಶ್ರೀ ಮಹಾದೇವ ಸ್ವಾಮಿಗಳು ಪ್ರವಚನ ನೀಡಲಿದ್ದಾರೆ ಎಂದರು.
ಜ. 22ರಂದು ಸಂಜೆ 5.30ಕ್ಕೆ ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಹರಪುರಾಧೀಶನ ದೀಪೋತ್ಸವ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಶಾಸಕರಾದ ಬಿ.ವೈ. ವಿಜಯೇಂದ್ರ, ಶಾರದಾ ಪೂರ್ಯಾನಾಯ್ಕ್, ಗೋಪಾಲಕೃಷ್ಣ ಬೇಳೂರು ಆಗಮಿಸಲಿದ್ದಾರೆ.
ಪತ್ರಕರ್ತ ಎನ್. ಮಂಜುನಾಥ್ ಅವರಿಗೆ ಗುರುರಕ್ಷೆ ನೀಡಲಾಗುವುದು. ನಂತರ ಹಾಸ್ಯಸಂಜೆ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಜ. 23ರಂದು ಸಂಜೆ 5.30ರಿಂದ ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ದೀಪೋತ್ಸವ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಸಚಿವ ಶಿವರಾಜ್ ತಂಗಡಗಿ, ಶಾಸಕ ಎಸ್.ಎನ್. ಚನ್ನಬಸಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಆಗಮಿಸಲಿದ್ದು, ಪತ್ರಕರ್ತ ಸಂತೋಷ್ ಕಾಚನಕಟ್ಟೆ ಅವರಿಗೆ ಗುರುರಕ್ಷೆ ನೀಡಲಾಗುವುದು. ನಂತರ ಹಾಸ್ಯ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
Also read: ಈ ಪ್ರಮಾಣ ಪತ್ರಗಳಿದ್ದರೆ ಟ್ರೇಡ್ ಲೈಸೆನ್ಸ್ ಪಡೆಯುವ ಅವಶ್ಯಕತೆ ಇಲ್ಲ: ಶಾಸಕ ಡಿ.ಎಸ್. ಅರುಣ್
ಜ. 24ರಂದು ಸಂಜೆ 5.30ರಿಂದ ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆಯುವ ದೀಪೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಶಾಸಕ ಆರಗ ಜ್ಞಾನೇಂದ್ರ, ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಆಗಮಿಸಲಿದ್ದಾರೆ. ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಅವರಿಗೆ ಗುರು ರಕ್ಷೆ ನೀಡಲಾಗುವುದು ಎಂದರು.
ಜ. 25ರ ಸಂಜೆ 5.30ರಿಂದ ನಡೆಯುವ ದೀಪೋತ್ಸವವು ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಡಿ.ಎಸ್. ಅರುಣ್, ಬಲ್ಕೀಶ್ ಬಾನು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಗಮಿಸಲಿದ್ದು, ಪತ್ರಿಕಾ ಛಾಯಾಗ್ರಾಹಕ ಯೋಗರಾಜ್ ಅವರಿಗೆ ಗುರುರಕ್ಷೆ ನೀಡಲಾಗುವುದು ಎಂದರು.
ಜ. 26ರಂದು ಮಧ್ಯಾಹ್ನ 3 ಗಂಟೆಯಿAದ ಜಾನಪದ ಕಲಾತಂಡಗಳೊAದಿಗೆ ಶ್ರೀ ಸಿದ್ಧಲಿಂಗೇಶ್ವರರ ಕಂಚಿನ ಪ್ರತಿಮೆಯ ರಾಜಬೀದಿ ಉತ್ಸವ ನಡೆಯಲಿದ್ದು, ಸಂಜೆ 5.30ರಿಂದ ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆಯುವ ದೀಪೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದೆ ಪ್ರಭಾ ಮಲ್ಲಿಕಾರ್ಜುನ, ಶಾಸಕ ಡಾ. ಧನಂಜಯ ಸರ್ಜಿ ಆಗಮಿಸಲಿದ್ದು, ಬೆಂಗಳೂರಿನ ಶಶಿಧರ ಕೋಟೆ, ಶಿವಮೊಗ್ಗದ ಹುಮಾಯೂನ್ ಹರ್ಲಾಪೂರ್, ಚೀಲೂರಿನ ಕೊಂಡಯ್ಯದಾಸ್, ಭದ್ರಾವತಿಯ ಲಕ್ಷಿö್ಮ ರಾಮಕ್ಕ ಹಾಗೂ ಸಾಗರದ ಗುಡ್ಡಪ್ಪ ಜೋಗಿ ಅವರಿಗೆ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರಾತ್ರಿ 10 ಗಂಟೆಗೆ ಆಕರ್ಷಕ ಸಿಡಿಮದ್ದು ಪ್ರದರ್ಶನವಿದೆ ಎಂದರು.
ದೀಪೋತ್ಸವದ ಅಂಗವಾಗಿ ಮಠದ ಆವರಣದಲ್ಲಿ ಡಾ. ಧನಂಜಯ ಸರ್ಜಿ ಅವರ ನೇತೃತ್ವದಲ್ಲಿ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ, ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗಣೇಶ್ ಆರ್. ಕೆಂಚನಾಲ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post