ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾವುದೇ ವಯೋಮಿತಿ ಇಲ್ಲದೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯ ವೃದ್ಧಿಸುವದರ ಜೊತೆಯಲ್ಲಿ ಬುದ್ಧಿಶಕ್ತಿಯು ಚುರುಕಾಗುತ್ತದೆ ಎಂದು ಮೌಂಟ್ ಕಾರ್ಮೆಲ್ ಸ್ಕೂಲ್ ವಿದ್ಯಾನಗರ ಸ್ಕೂಲಿನ ಮುಖ್ಯ ವ್ಯವಸ್ಥಾಪಕ ಸುನಿಲ್ ರೋಡ್ರಿಗಸ್ ಅಭಿಪ್ರಾಯಪಟ್ಟರು.
ಮೌಂಟ್ ಕಾರ್ಮೆಲ್ ಸ್ಕೂಲ್ ಮತ್ತು ನೆಹರು ಒಳಾಂಗಣದ ಕ್ರೀಡಾಂಗಣ ಆವರಣದಲ್ಲಿ ವಲಯ 10ರ ರೋಟರಿ ವಲಯ ಮಟ್ಟದ ಕ್ರೀಡೋತ್ಸವ 2024 ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ, ಜೀವನ ಶಿಸ್ತು, ಸಮಯಪ್ರಜ್ಞೆ ಸೋಲು ಗೆಲುವಿನ ಅನುಭವಗಳ ಪಾಠ ಬಳುವಳಿಯಾಗಿ ಬರುತ್ತದೆ ಎಂದರು.
ಕ್ರೀಡೆ ಸಾಂಸ್ಕೃತಿಕ ಮನೋರಂಜನೆಯು ಜೀವನದ ನೆಮ್ಮದಿಯ ಆರೋಗ್ಯಕ್ಕೆ ಪೂರಕವಾಗಿರುತ್ತದೆ ಮತ್ತು ಒಳ್ಳೆಯ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿರುತ್ತದೆ ಎಂದು ತಿಳಿಸಿದರು.
ರೋಟರಿ ವಲಯ 10 ಸಹಾಯಕ ಗೌವರ್ನರ್ ಎಸ್.ಆರ್. ನಾಗರಾಜ್ ಮಾತನಾಡಿ, ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯಕ್ರಮಗಳ ಜೊತೆಯಲ್ಲಿ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಹೆಚ್ಚಿನ ಮಹತ್ವವನ್ನು ನೀಡಿ ಸದಸ್ಯರ ಪ್ರತಿಭೆಯನ್ನು ಮುನ್ನೆಲೆಗೆ ತರುವುದಕ್ಕೆ ಅವಕಾಶ ಕಲ್ಪಿಸುತ್ತದೆ ಎಂದರು.
Also read: ಜುಲೈ 3-5: ಅಮೆರಿಕದಲ್ಲಿ ವಿಶ್ವ ಒಕ್ಕಲಿಗರ ಸಮ್ಮೇಳನ | ಏನೆಲ್ಲಾ ಪ್ರಮುಖ ಚರ್ಚೆ ನಡೆಯಲಿವೆ?
ರೊಟೇರಿಯನ್ ರವೀಂದ್ರನಾಥ್ ಐತಾಳ್ ಜೋನಲ್ ಟ್ರೆÊನರ್ ಮಾತನಾಡಿ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಇವುಗಳನ್ನು ಮೈಗೂಡಿಸಿಕೊಂಡಲ್ಲಿ ಖಿನ್ನತೆ ಕಡಿಮೆ ಮಾಡುವುದರ ಜೊತೆಯಲ್ಲಿ ದೈಹಿಕ ಮಾನಸಿಕವಾಗಿ ಸದೃಢತೆ ತಾನಾಯಿಗಿಯೇ ಬರುತ್ತದೆ. ಪರಸ್ಪರರಲ್ಲಿ ಒಡನಾಟ ಪ್ರೀತಿ ವಿಶ್ವಾಸ ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ರೋಟರಿ ವಲಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳು ಜಿಲ್ಲಾಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ ಎಂದು ಕ್ರೀಡಾ ವಲಯ ಸಂಯೋಜಕ ರೊಟೇರಿಯನ್ ಜಗದೀಶ್ ಸರ್ಜಾ ಅವರು ತಿಳಿಸಿದರು.
ವಲಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿದ ರೋಟರಿ ಕ್ಲಬ್ ರಿವರ್ ಸೈಡ್ ಅಧ್ಯಕ್ಷ ರೊಟೇರಿಯನ್ ಎಂ.ಆರ್. ಬಸವರಾಜ್ ಮಾತನಾಡಿ, ಇಂದಿನ ಕ್ರೀಡಾಕೂಟದಲ್ಲಿ ಭದ್ರಾವತಿ, ಶಿಕಾರಿಪುರ, ಶಿವಮೊಗ್ಗ ಸದಸ್ಯರುಗಳು ಮತ್ತು ಅವರ ಪರಿವಾರದವರು ಭಾಗವಹಿಸಿ ಕ್ರೀಡಾ ಪ್ರದರ್ಶನ ನೀಡುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.
ಮಾಜಿ ಸಹಾಯಕ ಗೌವರ್ನರ್’ಗಳಾದ ಎಂಪಿ ಆನಂದಮೂರ್ತಿ, ಎಂ. ಜಗನ್ನಾಥ್ ಮುಂದಿನ ಸಾಲಿನ ಸಾಯಕ ಗವರ್ನರ್ ಕೆ.ಪಿ. ಶೆಟ್ಟಿ, ಕ್ರೀಡಾ ವ್ಯವಸ್ಥಾಪಕರಾದ ಸಿ.ಎನ್. ಮಲ್ಲೇಶ್, ಕ್ರೀಡಾ ಚೇರ್ಮನ್ ಚೇತನ್ ಕುಮಾರ್, ಕಾರ್ಯದರ್ಶಿ ವಿನಯ್, ಬಿ.ಜಿ. ಧನರಾಜ್, ನಿತಿನ್ ಯಾದವ್, ಪಿ. ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post