ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಕಾಶವಾಣಿ ಭದ್ರಾವತಿ ಕೇಂದ್ರವನ್ನು #Akasahavani Bhadravathi Station ತಾಂತ್ರಿಕವಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಇನ್ನು ಮುಂದೆ ಯಾವುದೇ ಅಡಚಣೆ ಇಲ್ಲದೆ 100 ಕಿಮೀ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳು ಪ್ರಸಾರವಾಗಲಿವೆ ಎಂದು ಕೇಂದ್ರ ಮಾಹಿತಿ, ಪ್ರಸರಣ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಡಾ.ಎಲ್. ಮುರುಗನ್ #Minister Dr. L. Murugan ಹೇಳಿದರು.
ಪ್ರಸಾರ ಭಾರತಿ ಹಾಗೂ ಭದ್ರಾವತಿ ಆಕಾಶವಾಣಿ ಕೇಂದ್ರದ ವತಿಯಿಂದ ಇಂದು ವಿದ್ಯಾನಗರದ ದೂರದರ್ಶನ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಎಫ್‍ಎಂ ಟ್ರಾನ್ಸ್‍ಮೀಟರ್ (ಫ್ರೀಕ್ವೆನ್ಸಿ ಮಾಡ್ಯುಲೇಟರ್) #Freequency Modulator ಅಳವಡಿಕೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಡೀ ದೇಶದಲ್ಲಿ 2500 ಕೋಟಿ ರೂ. ವೆಚ್ಚದಲ್ಲಿ ಆಕಾಶವಾಣಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಪ್ರಧಾನ ಮಂತ್ರಿ ಮೋದಿಯವರು ಹಣ ಬಿಡುಗಡೆ ಮಾಡಿದ್ದಾರೆ. ಅದರಂತೆ ಕರ್ನಾಟಕದಲ್ಲಿ ನಾಲ್ಕು ಕೇಂದ್ರಗಳ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಅವುಗಳಲ್ಲಿ ಶಿವಮೊಗ್ಗವೂ ಒಂದಾಗಿದೆ. ಇಲ್ಲಿಯೇ ಸ್ಟುಡಿಯೋ ನಿರ್ಮಿಸಿ ಕಾರ್ಯಕ್ರಮಗಳ ಸಂಯೋಜನೆ ಮಾಡಲಾಗುತ್ತದೆ. ಸ್ಥಳೀಯ ಕಲೆ, ಸಂಸ್ಕøತಿ ಪ್ರಸಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದರು.
Also read: ಕೈಹಿಡಿದ ಪತ್ನಿಯನ್ನೇ ಕೊಂದು ಕುಕ್ಕರ್’ನಲ್ಲಿ ಬೇಯಿಸಿ ದುಷ್ಟ ಪತಿ ನಂತರ ಮಾಡಿದ್ದೇನು?
ತಾಂತ್ರಿಕವಾಗಿ ಮೇಲ್ದೆರ್ಜೆಗೇರುವುದರಿಂದ ಗುಡ್ಡಗಾಡು ಪ್ರದೇಶ, ದಟ್ಟಾರಣ್ಯದಲ್ಲಿರುವ ನಿವಾಸಿಗಳು ಕೂಡ ಕಾರ್ಯಕ್ರಮ ಆಲಿಸಬಹುದು. ಮೊಬೈಲ್‍ನಲ್ಲಿಯೂ ಕಾರ್ಯಕ್ರಮ ಕೇಳಬಹುದಾಗಿದೆ. ಈ ಕೇಂದ್ರ ಮೇಲ್ದರ್ಜೆಗೇರಿಸುವಲ್ಲಿ ಸಂಸದ ರಾಘವೇಂದ್ರ ಶ್ರಮ ಅಪಾರವಾಗಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಮಾತನಾಡಿ, ಭದ್ರಾವತಿ ಆಕಾಶವಾಣಿ ಕೇಂದ್ರದ ಟ್ರಾನ್ಸ್‍ಮೀಟರ್ ಸಾಮಥ್ರ್ಯವನ್ನು 1 ಕಿವ್ಯಾ ನಿಂದ 10 ಕಿವ್ಯಾಗೆ ಹೆಚ್ಚಿಸಲಾಗಿದೆ. 10 ಕೋಟಿ ರೂ. ವೆಚ್ಚದ ಟ್ರಾನ್ಸ್‍ಮೀಟರ್ ಕೆನಡಾದಿಂದ ತರಿಸಲಾಗಿದೆ ಎಂದರು.
ವಿದ್ಯುತ್, ಇಂಟರ್‍ನೆಟ್ ಇಲ್ಲದೆ ಜನರನ್ನು ಸುಲಭವಾಗಿ ತಲುಪುವುದು ರೇಡಿಯೋ ಮಾತ್ರ. ಇದನ್ನು ಮನಗಂಡು ಆಕಾಶವಾಣಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಡಾ.ರಾಜ್‍ಕುಮಾರ್ ಅಪಹರಣದ ಸಂದರ್ಭದಲ್ಲಿ ರೇಡಿಯೋದ ಮೂಲಕವೇ ಸಂದೇಶವನ್ನು ರವಾನಿಸಿ ಅವರನ್ನು ಸಂಪರ್ಕಿಸುವ ಕೆಲಸ ಮಾಡಲಾಗಿತ್ತೆಂದು ಸ್ಮರಿಸಿದರು.
ತಮಿಳು ಬಾಂಧವರು ಮಾತ್ರವಲ್ಲದೆ ಇಡೀ ಕರ್ನಾಟಕದ ಜನರು ಆರಾಧಿ ಬಾಲಸುಬ್ರಹ್ಮಣ್ಯನ ಮೂರ್ತಿಯನ್ನು ಗುಡ್ಡೇಕಲ್ಲಿನ ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ. ಸುಮಾರು 150 ಅಡಿಎತ್ತರದ ಬೃಹತ್ ಮೂರ್ತಿ ಇದಾಗಿದ್ದು, ಇದಕ್ಕೆ ನೆರವು ನೀಡುವಂತೆಯೂ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಆರಗ ಜ್ಞಾನೇಂದ್ರ, ಡಾ.ಧನಂಜಯ ಸರ್ಜಿ, ಡಿ.ಎಸ್. ಅರುಣ್, ಮಾಜಿ ಶಾಸಕ ಕೆ.ಬಿ. ಅಶೋಕ್‍ನಾಯ್ಕ್, ಆಕಾಶವಾಣಿ ದಕ್ಷಿಣ ವಲಯ ತಾಂತ್ರಿಕ ಮುಖ್ಯಸ್ಥ ಕೆ.ಟಿ. ಸಂಜೀವ್, ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್. ಭಟ್, ಡಾ. ರಘು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post