ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಹಂಟರ್ಸ್ ವತಿಯಿಂದ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಲೀಗ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ Tennis Ball Cricket Tournament ‘ಶಿವಮೊಗ್ಗ ಹಂಟರ್ಸ್ ಕಪ್-2026’ನ್ನು Shivamogga Hunters Cup ಏ.3, 4 ಮತ್ತು 5 ರಂದು ಎನ್‍ಇಎಸ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಂದ್ಯಾವಳಿಯ ಆಯೋಜಕರಲ್ಲೊಬ್ಬರಾದ ಚೇತು ರಾಗಿಗುಡ್ಡ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಥಮ ಬಹುಮಾನ 1 ಲಕ್ಷ ರೂ., ದ್ವಿತೀಯ 50 ಸಾವಿರ ರೂ., ಹಾಗೂ ತೃತೀಯ ಬಹುಮಾನ 25 ಸಾವಿರ ರೂ. ಇದ್ದು, ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.
38ವರ್ಷ ಮೇಲ್ಪಟ್ಟ ಆಟಗಾರರಿಗೆ ಅವಕಾಶವಿದ್ದು, (1988 ಇಸವಿಯೊಳಗೆ ಇರತಕ್ಕದ್ದು) ಆಯಾ ತಾಲೂಕು ಆಟಗಾರರಿರಬೇಕು. ಪಂದ್ಯಾವಳಿ 6 ಓವರ್ ಸೀಮಿತವಾಗಿದೆ. (ಸಮಯದ ಅಭಾವವಿದ್ದಲ್ಲಿ ಓವರ್ ಕಡಿತ ಮಾಡಲಾಗುವುದು). ಚೆಕ್ ಬೌಲರ್‍ಗಳಿಗೆ ಅವಕಾಶವಿರುವುದಿಲ್ಲ. ಚೆಕ್ ಎಸೆತದಲ್ಲಿ ಡೈರಕ್ಟ್ ನೋ ಬಾಲ್ ಕೊಡಲಾಗುವುದು. ತೀರ್ಪುಗಾರರ ಮತ್ತು ಸಮಿತಿಯ ಅಂತಿಮವೇ ತೀರ್ಮಾನವಾಗಿದೆ. ಅಸಭ್ಯವಾಗಿ ವರ್ತಿಸುವ ತಂಡಗಳಿಗೆ ಪಂದ್ಯಾವಳಿಯಿಂದ ಹೊರ ಹಾಕಲಾಗುವುದು. 10 ಸಾವಿರ ರೂ. ಪ್ರವೇಶ ಶುಲ್ಕವಿದೆ. ಈಗಾಗಲೇ 16 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ ಎಂದರು.
ಏ.3ರ ಬೆಳಿಗ್ಗೆ 9 ಗಂಟೆಗೆ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದ್ದು, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ, ಬಿ.ಕೆ.ಸಂಗಮೇಶ್, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಕೆ.ಬಿ.ಅಶೋಕ್‍ನಾಯ್ಕ್, ಮಾಜಿ ಜಿಪಂ ಸದಸ್ಯ ಕೆ.ಈ.ಕಾಂತೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ರಾಮಕೃಷ್ಣ, ಭದ್ರಾವತಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗಣೇಶ್ ಭಾಗವಹಿಸಲಿದ್ದಾರೆ ಎಂದರು.
ಏ.4ರಂದು ಕ್ರೀಡಾ ಸಾಧಕರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಜೆಡಿಎಸ್ ಶಿವಮೊಗ್ಗ ಜಿಲ್ಲಾ ವಕ್ತಾರ ನರಸಿಂಹ ಗಂಧದ ಮನೆ, ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಭದ್ರಾವತಿಯ ಕಾಂಗ್ರೆಸ್ ಯುವ ಮುಖಂಡ ಬಸವೇಶ್ ಆಗಮಿಸಲಿದ್ದಾರೆ ಎಂದರು.
ಏ.5ರಂದು ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಸೂಡಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಕಾಂಗ್ರೆಸ್ ಮುಖಂಡರಾದ ಹೆಚ್.ಸಿ.ಯೋಗೀಶ್, ನಾಗೇಶ್ ಹೊಳೆಹೊನ್ನೂರು, ಆರ್. ಉಮೇಶ್, ರಾಜ್ಯ ಕೈಮಗ್ಗ ಮೂಲ ಸೌಕರ್ಯ ಮಂಡಳಿ ಅಧ್ಯಕ್ಷ ಚೇತನ್ ಕೆ.ಗೌಡ, ಹಾಪ್‍ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಬಿಜೆಪಿ ಮುಖಂಡರಾದ ಸಿ.ಹೆಚ್.ಮಾಲತೇಶ್, ಎ.ಕೆ.ರಮೇಶ್ ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ಲೋಹಿತ್, ಮಧುಗೌಡ, ರಾಹುಲ್ ಗೌಡ, ಗಿರೀಶ್ ತಕಾಳಿ, ರಜತ್, ಮಿಥುನ್ ಗೌಡ, ಪ್ರಶಾಂತ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















