ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ನಿಜವಾದ ಧರ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಇಂದು ನಗರದ ಹರಕೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಜಗದ್ಗುರು ರಂಭಾಪುರೀಶ ನಿವಾಸದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಯುವ ಜನಾಂಗದಲ್ಲಿ ಅದ್ಭುತ ಶಕ್ತಿಯಿದೆ. ಧರ್ಮ ಮತ್ತು ದೇಶ ಕಟ್ಟಿ ಬೆಳೆಸುವುದರಲ್ಲಿ ಯುವ ಜನಾಂಗ ಶ್ರಮಿಸಿದರೆ ಬಹಳಷ್ಟು ಪ್ರಗತಿ ಸಾಧಿಸಲು ಸಾಧ್ಯವಿದೆ. ಶ್ರೀ ಪೀಠದ ಬಹು ದಿನಗಳ ಕನಸು ಇಂದು ನನಸಾದ ಸಂತೋಷ ನಮಗಿದೆ. ಭೂದಾನ ಮಾಡಿದ ಟಿ.ವಿ.ಈಶ್ವರಯ್ಯ ಸಹೋದರರ ಸೇವೆ ಅಮೂಲ್ಯವಾಗಿದೆ. ಭವಿಷ್ಯತ್ತಿನ ದಿನಗಳಲ್ಲಿ ಆದರ್ಶ ವಿದ್ಯಾಲಯ ಹುಟ್ಟು ಹಾಕುವ ಉದ್ದೇಶ ನಮಗಿದೆ ಎಂದರು.

ಮಾಜಿ ಉಪ ಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ #K S Eshwarappa ಮಾತನಾಡಿ ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ಪ್ರತಿಯೊಬ್ಬರಲ್ಲಿ ರಾಷ್ಟ್ರಾಭಿಮಾನ ಹಾಗೂ ಧರ್ಮಾಭಿಮಾನ ಬೆಳೆದುಕೊಂಡು ಬರಬೇಕಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಧಾರ್ಮಿಮ ಮತ್ತು ಸಾಮಾಜಿಕ ಚಿಂತನಗಳು ಭಕ್ತರ ಬಾಳಿಗೆ ಬೆಳಕು ತೋರುತ್ತವೆ ಎಂದರು.

Also read: ಚಿಕ್ಕಮಗಳೂರು ಪೊಲೀಸರ ಬೇಟೆ | ಮೂವರ ಬಂಧನ | ಶಿವಮೊಗ್ಗದ್ದೂ 4 ಸೇರಿ ಬರೋಬ್ಬರಿ 17 ಬೈಕ್ ಜಪ್ತಿ
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದರೆ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸಮುಖ ವಹಿಸಿದ್ದರು. ಮಳಲಿ ಡಾ.ನಾಗಭೂಷಣ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶ್ರೀಗಳು, ಕಡೆನಂದಿಹಳ್ಳಿ ರೇವಣಸಿದ್ದೇಶ್ವರ ಶ್ರೀಗಳು, ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶ್ರೀಗಳು, ಹುಣಸಘಟ್ಟದ ಗುರುಮೂರ್ತಿ ಶ್ರೀಗಳು, ಬೀರೂರು ರುದ್ರಮುನಿ ಶ್ರೀಗಳು, ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶ್ರೀಗಳು, ಚನ್ನಗಿರಿ ಡಾ| ಕೇದಾರ ಶಿವಶಾಂತವೀರ ಶ್ರೀಗಳು, ನಂದಿಪುರದ ನಂದೀಶ್ವರ ಶ್ರೀಗಳು, ರಟ್ಟಿಹಳ್ಳಿ ವಿಶ್ವೇಶ್ವರ ದೇವರು ಇದ್ದರು.

‘ಇದೇ ಸಂದರ್ಭದಲ್ಲಿ ಲಿಂ. ಶ್ರೀಮತಿ ರುದ್ರಮ್ಮ(ಮರುಳಮ್ಮ) ಲಿಂ.ಪಟೇಲ ವೀರಪ್ಪಯ್ಯ ತೇವರಚಟ್ನಳ್ಳಿ ಇವರ ಸ್ಮರಣಾರ್ಥ ಭೂ ದಾನ ಮಾಡಿರುವ ಲಿಂ.ಶ್ರೀಮತಿ ನಾಗರತ್ನಮ್ಮ ಲಿಂ.ಟಿ.ವಿ.ಲಿಂಗಯ್ಯ ಇವರ ಮಕ್ಕಳು, ಲಿಂ.ಶ್ರೀಮತಿ ಜಯಮ್ಮ ಟಿ.ವಿ.ಈಶ್ವರಯ್ಯ ಮತ್ತು ಮಕ್ಕಳು, ಲಿಂ. ಶ್ರೀಮತಿ ಸುನಂದಮ್ಮ ಟಿ.ವಿ.ರುದ್ರಯ್ಯ ಮತ್ತು ಮಕ್ಕಳು, ಲಿಂ. ಶ್ರೀಮತಿ ಲಲಿತಮ್ಮ ಬಿ.ಎಂ.ಹಾಲೇಶಯ್ಯ ಇವರ ಮಕ್ಕಳು, ಲಿಂ. ಶ್ರೀಮತಿ ವಿಜಯಮ್ಮ ಟಿ.ವಿ.ಶಿವಲಿಂಗಯ್ಯ ಮತ್ತು ಮಕ್ಕಳು ಇವರೆಲ್ಲರಿಗೂ ಶ್ರೀ ರಂಭಾಪುರಿ ಜಗದ್ಗುರುಗಳು ಶಾಲು ಹೊದಿಸಿ ಸ್ಮರಣಿಕೆ ನೀಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಸಮಿತಿಯ ಸದಸ್ಯರಿಗೆ ಹಾಗೂ ಭೂ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post