ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ಎಂಬ ಮೂರಕ್ಷರದಿಂದಲೇ ಪ್ರಸಿದ್ಧರಾದ ಕುಪ್ಪಳ್ಳಿಯ ಸಾಹಿತಿ, ರಸಋಷಿ, ವಿಶ್ವ ಮಾನವ ಸಂದೇಶ ಸಾರಿದ ವಿಶ್ವ ಮಾನವರಾದ ಕುವೆಂಪುರವರ #Kuvempu ಜನ್ಮ ಶತಮಾನೋತ್ಸವವನ್ನು ಹಾಗೂ ಜೀವನದ ಲೆಕ್ಕವನ್ನು ಸುಲಭವಾಗಿ ಅವಶ್ಯಕವಾಗಿ ನಮಗೆ ಪರಿಚಯಿಸಿದ ಎ ಕೆ ರಾಮಾನುಜನ್ ಅವರ ಜನ್ಮದಿನೋತ್ಸವ ಪಿ ಇ ಎಸ್ ಪಬ್ಲಿಕ್ ಶಾಲೆಯಲ್ಲಿ ಆಚರಿಸಲಾಯಿತು.
ಹೊಸ ವರ್ಷದ ವರ್ಷಾಚರಣೆಯಲ್ಲಿ ಪಿಇಎಸ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುವೆಂಪುರವರ 120ನೇ ವಿಶ್ವಮಾನವ ದಿನಾಚರಣೆ ಹಾಗೂ ಎ .ಕೆ. ರಾಮಾನುಜನ್ #Ramanujan ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಸಂಯೋಜಕರಾದ ಮಂಜಪ್ಪ ಅಡ್ಡೇರಿ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿ, ಋಷಿಯಾಗಿ ಸರಳ ಜೀವನ ನಡೆಸಿದ ಕುವೆಂಪುರವರ ಕುರಿತು ವಿಶ್ವಮಾನವ ದಿನಾಚರಣೆಯ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಗಣಿತ ವಿಭಾಗದ ಮುಖ್ಯಸ್ಥರಾದ ಲಿಂಗರಾಜು ಅವರು ಗಣಿತದ ಮಹತ್ವವನ್ನು ಹಾಗೂ ಎ.ಕೆ. ರಾಮಾನುಜನ್ ಅವರ ಗಣಿತದ ಕೊಡುಗೆಯನ್ನು ಮಕ್ಕಳಿಗೆ ಮನವರಿಕೆ ಮಾಡಿಸಿದರು.
ಮಕ್ಕಳು ಗಣಿತದ ಕುರಿತು ನೃತ್ಯ, ಹಾಡು, ನಾಟಕಗಳನ್ನು ಹಾಗೂ ಕುವೆಂಪುರವರ ಕುರಿತು ಹಾಡು, ಕವನ, ನೇಗಿಲಯೋಗಿ ನೃತ್ಯವನ್ನು ಮಾಡಿ ಎಲ್ಲರನ್ನೂ ಮನರಂಜಿಸಿದರು.
ವಿದ್ಯೆ ಎಂಬುದು ಸಾಮಾನ್ಯ ಮನುಷ್ಯನನ್ನು ಮೃಗತ್ವದಿಂದ ದೈವತ್ವಕ್ಕೆ ಕರೆದೊಯ್ಯುವ ಸಾಧನ. ಪ್ರೇರಣ ಪಬ್ಲಿಕ್ ಶಾಲೆಯು ಪ್ರತಿಯೊಂದು ಮಗುವಿನ ಶೈಕ್ಷಣಿಕ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಉತ್ತಮವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಮಕ್ಕಳನ್ನು ಸಂತೋಷ ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರೂ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಇದ್ದರು. ಗಣಿತ ವಿಭಾಗದ ಶಿಕ್ಷಕರಾದ ರಂಜಿತಾ ಹಾಗೂ ವಿಭಾ ಕ್ರಿಯಾತ್ಮಕ ಗಣಿತ ಕಲಿಕಾ ಚಟುವಟಿಕೆ ನಡೆಸಿಕೊಟ್ಟರು. ಚಿಂತನ ಸ್ವಾಗತ ಹಾಗೂ ಸಾಹಿತ್ಯ, ನವ್ಯ ಮತ್ತು ಪ್ರತಿಕ್ಷ ನಿರೂಪಣೆ ನೆರವೇರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post