ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದಲ್ಲಿ ಗ್ರಾಮೀಣ ಕೃಷಿ ಪರಿಸರ ಮತ್ತು ಅದನ್ನು ಅವಲಂಬಿಸಿರುವ ಸಮುದಾಯಗಳ ಉಳಿವಿಗೆ ದಿಕ್ಸೂಚಿಯಾಗುವಂತೆ ಲೋಕಸಭಾ ಚುನಾವಣೆ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇಂದು ಶಿವಮೊಗ್ಗದಲ್ಲಿ ಬಿಡುಗಡೆ ಮಾಡಿದ ರೈತರ ಪ್ರಣಾಳಿಕೆಯಲ್ಲಿ ಹಕ್ಕೋತ್ತಾಯಗಳನ್ನು ಮುಂದಿಟ್ಟಿದೆ.
ಇಂದು ಮೀಡಿಯಾ ಹೌಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ. ಗಂಗಾಧರ್ ಮಾತನಾಡಿ, ಕರ್ನಾಟಕದಲ್ಲಿ ಸಮೃದ್ದ ಮತ್ತು ಸುಸ್ತಿನ ಕೃಷಿ ಕ್ಷೇತ್ರದ ದೃಷ್ಟಿಕೋನವನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಹಾಗೂ ಮನುಕುಲದ ಒಳಿತಿಗಾಗಿ ಒತ್ತಾಯಗಳನ್ನು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಮುಂದಿಡುತ್ತಿದ್ದು, ಒತ್ತಾಯಗಳು ನೆರವೇರುವವರೆಗೂ ರೈತ ಚಳುವಳಿ ಸದಾ ಎಚ್ಚರವಾಗಿ ಗಮನಿಸಿರುತ್ತದೆ ಮತ್ತು ಅಗತ್ಯ ಬಿದ್ದರೆ ಹೋರಾಟಕ್ಕೂ ಸಿದ್ಧವಾಗಿದೆ ಎಂದರು.
ಎಫ್‍ಟಿಎ ಮತ್ತು ಡಬ್ಲ್ಯೂಟಿಓ ಮಾನಿಟಿರಿಂಗ್ ಸೇಲ್ ಜಾರಿಯಾಗಬೇಕು. ನೀರಾವರಿ ಯೋಜನೆಗಳನ್ನು ಸಕಾರಗೊಳಿಸಬೇಕು. ಭೂಸ್ವಾಧೀನ ಕಾಯ್ದೆಯನ್ನು ರೈತ ಪರವಾಗಿಸಬೇಕು. ಸರ್ಕಾರದ ನೀತಿಗಳಿಂದ ಹಾಗೂ ಅವಮಾನ ವೈಪರಿತ್ಯದ ಕಾರಣಗಳಿಂದ ಬಿಕ್ಕಟ್ಟಿಗೆ ಸಿಲುಕಿರುವ ರೈತ ಸಮುದಾಯದ ಒಟ್ಟು ಸಾಲ ಮನ್ನಾ ಮಾಡಬೇಕು. ಸರ್ವಾಧಿಕಾರಿ ಧೋರಣೆ ನಿಲ್ಲಿಸಿ ಪ್ರಜಾಸತಾತ್ಮಕವಾಗಿ ವರ್ತಿಸಬೇಕು. ಪರಿಸರ ಪೂರಕ ಕೃಷಿಗೆ ಪ್ರೋತ್ಸಹ ಧನ ನೀಡಬೇಕು. ಸಂವಿಧಾನದ ಆಶಯದಂತೆ ನೀತಿ ನಿರೂಪಣೆ ಮಾಡಬೇಕು ಸೇರಿದಂತೆ ಹಲವಾರು ಹಕ್ಕೋತ್ತಾಯಗಳನ್ನು ಮುಂದಿಡುತ್ತಿದ್ದೇವೆ ಎಂದರು.
Also read: ಅಭಿವೃದ್ಧಿಯ ಹರಿಕಾರ ಬಿ.ವೈ. ರಾಘವೇಂದ್ರ ಗೆಲ್ಲುವುದು ಶತಸಿದ್ಧ: ಚಾಬುಸಾಬ್
ಕೃಷಿ ಕೈಗಾರಿಕೆ ಆಧಾರಿತ ಉದ್ಯೋಗ ಸೃಷ್ಟಿಯಾಗಬೇಕು. ಕೃಷಿ ಉತ್ಪನ್ನಗಳ ಮಾರುಕಟ್ಟೆ ಸುಧಾರಣೆಯಾಗಬೇಕು. ಕೃಷಿ ಉತ್ಪಾದನೆಯಲ್ಲಿ ಉತ್ಪಾದಕತೆ ಹೆಚ್ಚಿಸಲು ಕ್ರಮ ವಹಿಸಬೇಕು. ಮಾನವ ವನ್ಯಜೀವಿ ಸಂಘರ್ಷನೆ ನಿರ್ವಹಿಸಬೇಕು ಎಂದು ಪ್ರಣಾಳಿಕೆಯಲ್ಲಿ ಒತ್ತಾಯಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಯಶವಂತರಾವ್ ಘೋರ್ಪಡೆ, ಸಣ್ಣ ರಂಗಪ್ಪ, ಕೆ.ಸಿ.ಗಂಗಾಧರ್, ಜಗದೀಶ್ ನಾಯಕ್, ಕೃಷ್ಣಮೂರ್ತಿ, ಮಂಜುನಾಥ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























