ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ನಗರದ ಏಕೈಕ ನಾಗಕ್ಷೇತ್ರವಾದ ಶ್ರೀನಾಗಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಮೇ 12 ಮತ್ತು 13ರಂದು 15ನೇ ಬ್ರಹ್ಮಕಲಶೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ ಉಪಾಧ್ಯ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇ12ರ ಸಂಜೆ 6ಕ್ಕೆ ವೇದಬ್ರಹ್ಮಶ್ರೀ ವಿದ್ವಾನ್ ವಸಂತಭಟ್ಟರ ನೇತೃತ್ವದಲ್ಲಿ ಪಂಚವಿಂಶತಿ ದ್ರವ್ಯಕಲಶ ಸಹಿತ ಅಷ್ಟೋತ್ತರ ಪರಿಕಲಶ ಮತ್ತು ಬ್ರಹ್ಮಕಲಶ ಸ್ಥಾಪನೆ ನೆರವೇರಲಿದ್ದು, ರಾತ್ರಿ 8.30ಕ್ಕೆ ಮಹಾಮಂಗಳರಾತ್ರಿ ನಡೆಯಲಿದೆ ಎಂದರು.
ಮೇ 13ರ ಬೆಳಿಗ್ಗೆ 7ಕ್ಕೆ ಕುಲದೇವತಾ ಪ್ರಾರ್ಥನೆ, ಗುರು-ಗಣೇಶ ಪೂಜಾ, ಕಲಾತತ್ವ ಹೋಮ-ಅಧಿವಾಸ ಹೋಮ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಶ್ರೀಕ್ಷೇತ್ರ ಹರಿಹರಪುರ ಮಠದ ಜಗದ್ಗುರು ಶ್ರೀಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಅಮೃತಹಸ್ತದಿಂದ ಬ್ರಹ್ಮಕಲಾಶಭಿಷೇಕ ನೆರವೇರಲಿದೆ ನಂತರ ಮಧ್ಯಾಹ್ನ 12ಕ್ಕೆ ಜಗದ್ಗುರುಗಳ ಅನುಗ್ರಹ ಆಶೀರ್ವಚನ ನಡೆಯಲಿದ್ದು, ನಂತರ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ, ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದ ಅವರು, ಹೆಚ್ಚಿನ ಮಾಹಿತಿಗಾಗಿ 9964597654ನ್ನು ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಹೆಚ್.ರಾಮಲಿಂಗಪ್ಪ,ಕಾರ್ಯದರ್ಶಿ ಕೆ.ಎ. ರಮೇಶ್,ನಾಗರಾಜ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























