ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೃದಯಭಾಗವಾದ ಎಎ ವೃತ್ತದ ಬಳಿಯಲ್ಲಿ ಖಾಸಗೀ ಮಿನಿ ಬಸ್’ವೊಂದು ಪಲ್ಟಿಯಾಗಿದ್ದು, ಅದೃಷ್ಟವಷಾತ್ ಯಾರಿಗೂ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ.
ಘಟನೆ ಹೇಗಾಯ್ತು?
ಮಿನಿ ಬಸ್ ಎಎ ವೃತ್ತದ ಬಳಿ ಬಂದಾಗ ಗೋಪಿ ವೃತ್ತದ ಕಡೆಯಿಂದ ಬಂದ ಆಟೋವೊಂದು ಅಡ್ಡ ಬಂದಿದೆ. ಈ ವೇಳೆ ಇದನ್ನು ತಪ್ಪಿಸಲು ಯತ್ನಿಸಿದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ.
ಬಸ್’ನಲ್ಲಿ ಯಾವ ಪ್ರಯಾಣಿಕರೂ ಇರಲಿಲ್ಲ. ಚಾಲಕ ಒಬ್ಬರೆ ಇದ್ದರು. ಹೀಗಾಗಿ, ಅನಾಹುತವೊಂದು ತಪ್ಪಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾರಿದ್ದಾರೆ.
ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















