ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ನಗರದ ಪೇಸ್ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಪೇಸ್ ಕಾಲೇಜಿನ ಒಟ್ಟು 624 ವಿದ್ಯಾರ್ಥಿಗಳಲ್ಲಿ 380 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 236 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯನ್ನು ಪಡೆದು 99.2% ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿರುತ್ತಾರೆ.
ಹೆಚ್.ಎಸ್. ಶೋಭಿತ 594, ಎಂ. ಸಿಂಚನ 593, ಆರ್.ಡಿ. ಸುಜನ್ 592, ವಿ.ಎನ್. ಹರ್ಷಿತಾ 590, ಎ.ಜಿ. ದಿವ್ಯಾ 588, ಹೆಚ್.ಯು. ಪ್ರಾರ್ಥನಾ 587, ಎಂ.ಟಿ. ಇಂದುಧರ್ 587, ವಿ. ಸುಬ್ರಹ್ಮಣ್ಯ 586, ಪಿ. ದೀಕ್ಷಿತಾ 585 ಅಂಕ ಗಳಿಸಿದ್ದಾರೆ.
ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕ
- ಕನ್ನಡ – 8
- ಸಂಸ್ಕೃತ – 21
- ಬೌತಶಾಸ್ತ್ರ – 4
- ರಸಾಯನಶಾಸ್ತ್ರ – 9
- ಗಣಿತ – 23
- ಜೀವಶಾಸ್ತ್ರ – 17
- ಕಂಪ್ಯೂಟರ್ ಸೈನ್ಸ್ – 8
ಈ ಸಾಧನೆಗೆ ಕಾಲೇಜಿನ ಟ್ರಸ್ಟಿಗಳು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post