ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಎಷ್ಟು ಮುಖ್ಯವೋ ಸಕಾರಾತ್ಮಕ ಯೋಚನೆಗಳೂ ಸಹ ಅಷ್ಟೇ ಮುಖ್ಯವಾದುದು ಎಂದು ಬೆಂಗಳೂರಿನ ಆರ್’ಎನ್’ಎಸ್ ತಾಂತ್ರಿಕ ಸಂಸ್ಥೆಯ ನಿರ್ದೇಶಕರಾದ ಡಾ.ಎಂ.ಕೆ. ವೆಂಕಟೇಶ್ ಅಭಿಪ್ರಾಯಪಟ್ಟರು.
ಪಿಇಎಸ್ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಯಲ್ಲಿ 15ನೇ ಪದವಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಪದವಿಯನ್ನು ಪಡೆದುಕೊಳ್ಳುವ ಹೊಸ್ತಿಲಲ್ಲಿರುವ ನೀವುಗಳು ನಿರಂತರವಾಗಿ ಬದುಕಿನಲ್ಲಿ ಕಲಿಕೆಯನ್ನು ರೂಢಿಸಿಕೊಳ್ಳಬೇಕು ಹಾಗೂ ನಿಮ್ಮಜ್ಞಾನದ ವಲಯವನ್ನು ವಿಸ್ತರಿಸಿಕೊಳ್ಳಬೇಕು. ಪದವಿ ಎನ್ನುವುದು ಕೇವಲ ವಿದ್ಯಾರ್ಹತೆ ಅಲ್ಲ ಇದೊಂದು ಜವಾಬ್ದಾರಿ ಆಗಿದೆ. ಯಾವುದೇ ಕೆಲಸವನ್ನು ಕಷ್ಟಪಟ್ಟು ಮಾಡುವುದಕ್ಕಿಂತ ಇಷ್ಟಪಟ್ಟು ಮಾಡಿ ಎಂದಿಗೂ ಎದೆಗುಂದ ಬೇಡಿ ಮತ್ತು ನಿಮ್ಮ ಬದುಕಿನಲ್ಲಿ ನಿಶ್ಚಿತವಾದ ಗುರಿಯನ್ನು ಇರಿಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.
ಪ್ರಾಮಾಣಿಕತೆ, ಸತ್ಯ, ಸಮಯ ಪರಿಪಾಲನೆ, ಮಾನವೀಯತೆ, ಮುಂತಾದವುಗಳನ್ನು ರೂಢಿಸಿಕೊಳ್ಳಿ. ಹಾಗೆಯೇ ನಿಮ್ಮ ಬದುಕಿನಲ್ಲಿ ಮುಂದೆ ಗುರಿ ಹಾಗೂ ಹಿಂದೆ ಗುರುವನ್ನು ಇರಿಸಿಕೊಂಡಲ್ಲಿ ಉನ್ನತವಾದ ಸಾಧನೆಯನ್ನು ಮಾಡಲು ಸಾಧ್ಯ. ಹಾಗೆಯೇ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಸಕಾರಾತ್ಮಕವಾಗಿ ಯೋಚಿಸಿ ಎಂದು ಕರೆ ನೀಡಿದರು.
ಪಿಇಎಸ್ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆ (ಪಿಇಎಸ್‌ಐಟಿಎಮ್) ಶಿವಮೊಗ್ಗ ಇದರ 15ನೇ ಪದವಿ ಪ್ರದಾನ ಸಮಾರಂಭ ಮೇ 31, 2025 ರಂದು ವಿಜೃಂಭಣೆಯಿAದ ಆಚರಿಸಲಾಯಿತು. ಸಮಾರಂಭವು ಸಂಸ್ಥೆಯ ಶೈಕ್ಷಣಿಕ ಸಾಧನೆಗಳನ್ನು ಎತ್ತಿ ಹಿಡಿದಿದ್ದು, ವಿದ್ಯಾರ್ಥಿಗಳ ಪ್ರಯತ್ನ, ಸಮರ್ಪಣೆ ಮತ್ತು ಯಶಸ್ಸಿಗೆ ಗೌರವ ಸಲ್ಲಿಸಲಾಯಿತು. ಈ ವಿಶೇಷ ದಿನವು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅಂತ್ಯವಲ್ಲದೆ ಹೊಸಜೀವನದ ಆರಂಭವನ್ನು ಸಂಕೇತಿಸಿತು.
ಈ ಬಾರಿಯ ಸಮಾರಂಭದಲ್ಲಿ ವಿವಿಧ ಶಾಖೆಗಳ ವಿದ್ಯಾರ್ಥಿಗಳಲ್ಲಿ 650ಕ್ಕೂ ಹೆಚ್ಚು ಸ್ನಾತಕ ಪದವಿ, 120 ಸ್ನಾತಕೋತ್ತರ ಪದವಿ ಮತ್ತು 2 ಪಿಎಚ್‌ಡಿ ವಿದ್ಯಾರ್ಥಿಗಳು ಪದವಿಗಳನ್ನು ಪಡೆದರು. ಈ ಸಾಧನೆ ಪಿಇಎಸ್‌ಐಟಿಎಂ ಸಂಸ್ಥೆಯ ಶೈಕ್ಷಣಿಕ ನಿಷ್ಠೆ ಮತ್ತುಗುಣಮಟ್ಟದ ಸಂಶೋಧನೆ ಮತ್ತು ಸಾಮಾಜಿಕ ಸೇವೆಗಳತ್ತ ಸಂಬAಧಿತ ದೃಷ್ಠಿಕೋನವನ್ನು ಪ್ರಾಮಾಣಿಕವಾಗಿ ಪ್ರತಿಬಿಂಬಿಸುತ್ತಿದೆ.
ಪಿಇಎಸ್‌ಐಟಿಎಮ್‌ನ ಉಪಪ್ರಾಚಾÀರ್ಯರಾದ ಡಾ. ಆರ್ ಸೇಕರ್, ಸ್ವಾಗತಿಸಿ, ಪಿಇಎಸ್ ಟ್ರಸ್ಟ್ ಮುಖ್ಯ ಸಂಯೋಜಕ ಡಾ.ಆರ್ ನಾಗರಾಜ್ ಅವರು ಕಳೆದ ಶೈಕ್ಷಣಿಕ ವರ್ಷದ ಸಾಧನೆಗಳನ್ನು ವಿವರಿಸಿ ಪದವಿ ದಿನದ ವರದಿ ವಾಚಿಸಿದರು.
ಸಂಸ್ಥೆಯ ಸಿಇಓ ಹಾಗೂ ಪಿಇಎಸ್ ಟ್ರಸ್ಟ್ ನಿರ್ದೇಶಕಿ ಎಸ್.ವೈ. ಉಮಾದೇವಿ ಅವರು ಅಧಿಕೃತವಾಗಿ ಪದವಿ ಸಮಾರಂಭವನ್ನು ಘೋಷಿಸಿದರು.
ನಂತರ ಮಾತನಾಡಿದ ಅವರು, ಸಂಸ್ಥೆಯ ಯಶಸ್ಸಿನಲ್ಲಿ ನಿಮ್ಮೆಲ್ಲರ ಪಾತ್ರವು ಇದೆ. ನೀವು ಪದವಿಯ ನಂತರದಲ್ಲಿ ನಿಮ್ಮ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ವಿವಿಧ ಕ್ಷೇತ್ರಗಳಲ್ಲಿ ಉನ್ನತವಾದ ಕೊಡುಗೆಗಳನ್ನು ಸಮಾಜಕ್ಕೆ ನೀಡುವುದರ ಮೂಲಕ ಕೊಡುಗೆಗಳನ್ನು ನೀಡಬೇಕು. ವಿದ್ಯಾರ್ಥಿಗಳ ಜ್ಞಾನವನ್ನು ಸಮಾಜ ಕಲ್ಯಾಣಕ್ಕೆ ಬಳಸಲು ಪ್ರೇರೇಪಿಸಿದರು.
ಪದವೀಧರರ ಪರವಾಗಿ ಡಾ.ಲೈಕ್ವಿನ್ ಥಾಮಸ್ ಭಾವಪೂರ್ಣ ಧನ್ಯವಾದದ ಭಾಷಣ ನೀಡಿ ಶಿಕ್ಷಕರು, ಕುಟುಂಬ, ಸ್ನೇಹಿತರು ಹಾಗೂ ಪಿಇಎಸ್‌ಐಟಿಎಮ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಡಾ. ಪ್ರಸನ್ನಕುಮಾರ್ ಎಚ್‌ಆರ್, ಅಕಾಡೆಮಿಕ್ ಡೀನ್ ಮತ್ತು ಐಎಸ್’ಇ ವಿಭಾಗದ ಮುಖ್ಯಸ್ಥರು, ಧನ್ಯವಾದ ಅರ್ಪಣೆಯ ಮೂಲಕ ಸಮಾರಂಭದಲ್ಲಿ ವಂದನೆಗಳನ್ನು ಸಲ್ಲಿಸಿದರು.
ಪದ್ಮಾವತಿ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post