ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯವನ್ನು ಮುಸ್ಮಿಮರಿಗೆ ಮಾರಿಬಿಡಿ ಎಂದು ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ #K S Eshwarappa ಇಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅವರ ನಡವಳಿಕೆಗಳೇ ನೆಮ್ಮದಿ ತರುತ್ತಿಲ್ಲ. ಓಲೈಕೆ ರಾಜಕಾರಣ ಎಷ್ಟು ದಿನ? ಮುಸ್ಲಿಮರು ಏನು ಬೇಕಾದರೂ ಈ ರಾಜ್ಯದಲ್ಲಿ ಮಾಡಬಹುದೇ? ನಮ್ಮ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದರೂ ಸುಮ್ಮನಿರಬೇಕು, ಪೊಲೀಸ್ ಜೀಪ್ ಗಳಿಗೆ ಬೆಂಕಿ ಹಚ್ಚಿದರೂ ಸುಮ್ಮನಿರಬೇಕು, ಎಲ್ಲಿಯವರೆಗೂ ಈ ರೀತಿಯ ಆಡಳಿತ? ಅದರಲ್ಲೂ ಹೆಣ್ಣುಮಕ್ಕಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದರು.
ಹಾವೇರಿಯ ಸ್ವಾತಿ #Swathi Murder in Haveri ಅವರನ್ನು ಹೀನಾಯವಾಗಿ ಲವ್ ಜಿಹಾದ್ #Lovejihad ಮೂಲಕ ಬಲೆಗೆ ಬೀಳಿಸಿಕೊಂಡು ಕಾಡಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ ನದಿಗೆ ಶವ ಎಸೆಯುತ್ತಾರೆ ಎಂದರೆ ಹೇಗೆ ಸಹಿಸಿಕೊಂಡು ಇರಬೇಕು. ಇಡೀ ರಾಜ್ಯವೇ ತಲೆತಗ್ಗಿಸುವಂತಹ ವಿಚಾರವಾದರೂ ಕೂಡ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಕನಿಷ್ಠ ಖಂಡನೆಯನ್ನೂ ಕೂಡ ಮಾಡಿಲ್ಲ ಎಂದರು.
Also read: ಅರಣ್ಯ ಕಳೆದುಕೊಂಡ ಕೃಷಿಕಾರ್ಯಕ್ಕೆ ಭವಿಷ್ಯವಿಲ್ಲ | ಶ್ರೀಪಾದ ಬಿಚ್ಚುಗತ್ತಿ
ಸ್ವಾತಿಯ ಕುಟುಂಬಕ್ಕೆ ಸಾಂತ್ವನ ಹೇಳಲು ರಾಷ್ಟ್ರ ಭಕ್ತರ ಬಳಗದ ಸದಸ್ಯರು ನಾಳೆ ನಾವು ಮಾಸೂರಿಗೆ ಹೋಗುತ್ತಿದ್ದೇವೆ. ಇಂದು ಮಾಸೂರಿನ ಬಂದ್ ಕೂಡ ನಡೆಯುತ್ತಿದೆ. ಏನೇ ಮಾಡಿದರೂ ಈ ಮುಸ್ಲಿಂ ಗೂಂಡಾಗಳಿಗೆ ರಾಜ್ಯ ಸರ್ಕಾರದ ಬೆಂಬಲ ಇರುತ್ತದೆ. ರಾಜ್ಯ ಸರ್ಕಾರ ಈಗಲಾದರೂ ಎಚ್ಚತ್ತುಕೊಳ್ಳಬೇಕು. ಇಂತಹ ಘಟನೆಗಳು ನಡೆದಾಗ ಆರೋಪಿಗಳನ್ನು ಗುಂಡಿಟ್ಟು ಕೊಲ್ಲುವಂತಹ ಕಾನೂನನ್ನು ಜಾರಿ ಮಾಡಬೇಕು ಎಂದರು.
ಮುಸ್ಲಿಂ #Muslim ಮೀಸಲಾತಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮುಸ್ಲಿಮರಿಗೆ ಎಷ್ಟು ಅಂತ ಮೀಸಲಾತಿ ಕೊಡುತ್ತೀರಿ. ರಾಷ್ಟ್ರದ ಯಾವ ರಾಜ್ಯದಲ್ಲಿಯೂ ಕೂಡ ಇಲ್ಲದ ಮೀಸಲಾತಿ ಇಲ್ಲಿದೆ. ಕನಿಷ್ಟ ಸಂವಿಧಾನಕ್ಕೆ ಬೆಲೆ ಕೊಡಿ. ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಇಲ್ಲವೇ ಇಲ್ಲ. ಅಂಬೇಡ್ಕರ್ ಕೂಡ ಹೇಳಿಲ್ಲ. ಆದರೂ ಮೀಸಲಾತಿ ನೀಡುತ್ತಾರೆ ಎಂದರು.
ಹಿಂದೂಗಳ #Hindu ತಾಳ್ಮೆ ಪರೀಕ್ಷೆ ಮಾಡಬೇಡಿ. ಕಾಂಗ್ರೆಸ್ ಸರ್ಕಾರದ ಕೊನೆಯ ಕ್ಷಣವಿದು. ಇನ್ನೆಂದೂ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುವುದಿಲ್ಲ. ಮತ್ತು ಇಂತಹ ದುರಾಡಳಿತ ನಡೆಸುತ್ತಾ ಹೋದರೆ, ಕಾಂಗ್ರೆಸ್ ನ ಸಚಿವರುಗಳನ್ನೇ ಅಟ್ಟಾಡಿಸಿಕೊಂಡು ಹೊಡೆಯುವ ಕಾಲ ಕೂಡ ದೂರವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇ. ವಿಶ್ವಾಸ್, ಕಾಚನಕಟ್ಟೆ ಸತ್ಯನಾರಾಯಣ, ಬಾಲು, ಶಿವಾಜಿ, ಕುಬೇರಪ್ಪ, ಮೋಹನ್ ಜಾಧವ್, ಠಾಕ್ರಾನಾಯ್ಕ, ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post