ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ: ನಗರದ ಆರ್ಯವೈಶ್ಯರ ಮಾತೃ ಸಂಸ್ಥೆಯಾದ ಆರ್ಯವೈಶ್ಯ ಮಹಾಜನ ಸಮಿತಿಯು ಈ ವರ್ಷ ಶತಮಾನೋತ್ಸವವನ್ನು ಆಚರಿಸುತ್ತಿದ್ದು, ಇದರ ಭಾಗವಾಗಿ ಜೂ.2ರಂದು ವಿನಾಯಕ ನಗರದಲ್ಲಿರುವ ನವ್ಯಶ್ರೀ ಸಭಾಂಗಣದಲ್ಲಿ “ಶೆಟ್ಟರ ಸಂತೆ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಭೂಪಾಳಂ ಶಶಿಧರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಿತಿಯ ವತಿಯಿಂದ ಈ ವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೂ.2ರ ಬೆಳಿಗ್ಗೆ 10.30ಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪನವರು ಶೆಟ್ಟರ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.
ಶೆಟ್ಟರ ಸಂತೆ ಸಮಿತಿಯ ಅಧ್ಯಕ್ಷೆ ಪ್ರತಿಭಾ ಡಿ.ಎಸ್. ಅರುಣ್ ಮಾತನಾಡಿ, ಈ ಶೆಟ್ಟರ ಸಂತೆಯಲ್ಲಿ ಶೆಟ್ಟರ ಬ್ಯ್ರಾಂಡ್ ಪದಾರ್ಥಗಳಾದ ಚಕ್ಕುಲಿ, ಕೊಡುಬಳೆ, ಕಟ್ಲೆಟ್, ನಿಪ್ಪಟ್ಟು, ಹೊಯ್ ಹಪ್ಪಳ, ಹಪ್ಪಳದ ಇಡ್ಲಿ, ಮಸಾಲ ಮಂಡಕ್ಕಿ, ಬೋಂಡಾ ಮಸಾಲೆ, ಪಾನಿಪೂರಿ ಸೇರಿದಂತೆ ರುಚಿರುಚಿಯಾದ ಹೋಂಮೇಡ್ ಕೇಕ್ ಇತ್ಯಾದಿ ಹತ್ತು ಹಲವಾರು ಕುರುಕು ತಿಂಡಿಗಳು ಒಂದೇ ಸೂರಿನಡಿ ದೊರೆಯಲಿವೆ ಎಂದರು.
Also read: ಪ್ರಜ್ಞಾವಂತರು ಅತ್ಯಧಿಕ ಮತ ನೀಡಿ ಗೆಲ್ಲಿಸಿ: ಡಾ. ಧನಂಜಯ ಸರ್ಜಿ ಮನವಿ
ಪ್ರತ್ಯೇಕ ಹಾಲ್‍ನಲ್ಲಿ ಸೀರೆಗಳು, ಡ್ರೆಸ್, ಮೆಟೆರಿಯಲ್ಸ್, ಮಕ್ಕಳ ರೆಡಿಮೇಡ್ ಉಡುಪುಗಳು, ವಸ್ತ ವಿನ್ಯಾಸಕರರ ವಿಶಿಷ್ಟತೆಗಳ ಕರಕುಶಲ ವಸ್ತುಗಳು, ಜೂಟ್ ಬ್ಯಾಗ್‍ಗಳು, ಬ್ಯೂಟಿ ಅಸೆಸರೀಸ್ ಇತ್ಯಾದಿಗಳೊಂದಿಗೆ ಸಾರ್ವಜನಿಕರು ಪಾಲ್ಗೊಳ್ಳುಬಹುದಾದ ಮನೋರಂಜನೆ ಹಾಗೂ ಸಾಂಸ್ಕøತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈ ವಿಭಿನ್ನ ಕಾರ್ಯಕ್ರಮವು ಅಂದು ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ನಡೆಯಲಿದೆ ಎಂದರು.
ಸಮಿತಿಯ ಉಪಾಧ್ಯಕ್ಷ ಎಂ.ಜಿ. ಮಂಜುನಾಥ್ ಮಾತನಾಡಿ, ಈ ವಿಶಿಷ್ಟ ಕಾರ್ಯಕ್ರಮಕ್ಕೆ ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹಾಗೂ ಅವರ ಪತ್ನಿ ಪ್ರತಿಭಾ ಡಿ.ಎಸ್. ಅರುಣ್ ಚಾಲನೆ ನೀಡಲಿದ್ದು, ಕುರುಕು ತಿಂಡಿ ವಿಭಾಗವನ್ನು ಪರಿಸರ ಪ್ರೇಮಿ ಎಂ.ವಿ. ನಾಗೇಶ್, ಶಶಿಕಲಾ ದಂಪತಿ ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪನವರ ದಂಪತಿ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಆರ್ಯವೈಶ್ಯ ಚಾರಿಟಬಲ್ ಟ್ರಸ್ಟ್‍ನ ಟಿ.ಆರ್.ಅಶೋಕ್‍ನಾರಾಯಣ್ ಶೆಟ್ಟಿ ದಂಪತಿ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಜೆ. ಅಶ್ವಥನಾರಾಯಣ್, ಕೆ.ಜಿ. ರಮೇಶ್, ಶ್ರೀನಾಥ್, ನರೇಶ್, ವಿದ್ಯಾ ಸುದರ್ಶನ್, ಶಂಕರ ನಾರಾಯಣ, ಸಿ.ಆರ್. ಶ್ರೀನಿವಾಸ್, ಹೆಚ್ ನಾಗರಾಜ್ ಶೆಟ್ಟರ್, ರಾಧಿಕಾ ಮಾಲತೇಶ್ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post