ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕೆಎಸ್’ಆರ್’ಟಿಸಿ ಬಸ್ ನಿಲ್ದಾಣದಲ್ಲಿ #KSRTC Bus ರಶ್ ಇದ್ದ ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್’ನಿಂದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಹೇಗಾಯ್ತು ಘಟನೆ?
ದಾವಣಗೆರೆ ಮೂಲದ ಜ್ಯೋತಿ ಎನ್ನುವವರು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿದ್ದರು. ಈ ಅವಕಾಶವನ್ನು ಬಳಸಿಕೊಂಡ ಕಳ್ಳರು ಜ್ಯೋತಿ ಅವರು ಬಸ್ ಹತ್ತುವ ವೇಳೆ ಇದ್ದ ಪ್ರಯಾಣಿಕರ ಒತ್ತಡದಲ್ಲಿ ವ್ಯಾನಿಟಿ ಬ್ಯಾಗ್ ಜಿಪ್ ತೆಗೆದು ಒಳಗಿದ್ದ 10 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಹಾಗೂ 5 ಗ್ರಾಂ ತೂಕದ ಚಿನ್ನದ ಓಲೆಗಳನ್ನು ಕಳ್ಳತನ ಮಾಡಿದ್ದಾರೆ.
ಜ್ಯೋತಿ ಅವರು ಬಸ್ ಹತ್ತಿದ ನಂತರ ಬ್ಯಾಗ್ ಪರಿಶೀಲಿಸಿಕೊಂಡಿದ್ದು ಆಗ ಒಡವೆ ಕಳ್ಳತನ ನಡೆದಿರುವುದು ತಿಳಿದುಬಂದಿದೆ.
ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















