No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Tuesday, October 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗದ ಇಂದಿನ ಸುದ್ಧಿಗಳು: ಈಶಾನ್ಯ ರಾಜ್ಯ‌ಗಳಲ್ಲಿ ಬಿಜೆಪಿ ಸರ್ಕಾರ ರಚನೆ ಹಿನ್ನೆಲೆ ಸಂಭ್ರಮಾಚರಣೆ

ಕಾಂಗ್ರೆಸ್‌ಗೆ ತೀ.ನಾ. ಶ್ರೀನಿವಾಸ್ ರಾಜೀನಾಮೆ | ಮಾ.11, 12 ಅಹೋರಾತ್ರಿ ಗಮಕ ಕಾರ್ಯಕ್ರಮ | ಮಾ. 10-12ರವರೆಗೆ ಆರ್‌ಪಿಎಂ ಆಟೋಮೋಟಿವ್ ಶೋ

kalpa News by kalpa News
March 9, 2023
in ಶಿವಮೊಗ್ಗ
0
ಶಿವಮೊಗ್ಗದ ಇಂದಿನ ಸುದ್ಧಿಗಳು: ಈಶಾನ್ಯ ರಾಜ್ಯ‌ಗಳಲ್ಲಿ ಬಿಜೆಪಿ ಸರ್ಕಾರ ರಚನೆ ಹಿನ್ನೆಲೆ ಸಂಭ್ರಮಾಚರಣೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ನಗರದ ಬಿಜೆಪಿ ಕಚೇರಿ ಮುಂಭಾಗ ಶಿವಮೊಗ್ಗ ನಗರ ಬಿಜೆಪಿ ಸಮಿತಿ ವತಿಯಿಂದ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಈಶಾನ್ಯ ರಾಜ್ಯಗಳಾದ ತ್ರಿಪುರ, ಮಣಿಪುರ ಹಾಗೂ ನಾಗಲ್ಯಾಂಡ್‌ಗಳಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿರುವ ಹಿನ್ನಲೆಯಲ್ಲಿ ಇಂದು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ.ಈ.ಕಾಂತೇಶ್, ಹರಿಕೃಷ್ಣ, ಸೂಡಾ ಅಧ್ಯಕ್ಷ ನಾಗರಾಜ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಚನ್ನಬಸಪ್ಪ, ರತ್ನಾಕರ್‌ಶೆಣೈ, ಮಾಲತೇಶ್, ವಿರುಪಾಕ್ಷಪ್ಪ, ದೀನ್‌ದಯಾಳ್, ವಿನ್‌ಸೆಂಟ್, ಸುವರ್ಣಶಂಕರ್, ಲಕ್ಷ್ಮೀ ಶಂಕರ್‌ನಾಯ್ಕ್, ಸುರೇಖಾ ಮುರುಳೀಧರ್, ಆರತಿ ಅ.ಮ.ಪ್ರಕಾಶ್ ಮೊದಲಾದವರಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಸಾಗರದ ಹಿರಿಯ ಮುಖಂಡ ತೀ.ನಾ. ಶ್ರೀನಿವಾಸ್ ರಾಜೀನಾಮೆ
ಕಾಂಗ್ರೆಸ್ ಪಕ್ಷಕ್ಕೆ ಸಾಗರದ ಹಿರಿಯ ಮುಖಂಡ ಸಾಗರದ ತೀ.ನಾ. ಶ್ರೀನಿವಾಸ್ ರಾಜೀನಾಮೆ ನೀಡಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ತೀ.ನ. ಶ್ರೀನಿವಾಸ್, ಇತ್ತೀಚಿನ ದಿಗಳಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಆಗಾಗ ನಾನು ಪ್ರಸ್ತಾಪ ಮಾಡುತ್ತಲೂ ಇದ್ದೆ. ಬಹಳ ಮುಖ್ಯವಾಗಿ ಮಲೆನಾಡು ರೈತರ ಸಮಸ್ಯೆಗಳಿಗೆ ಸ್ಪಂದಿಸಲೇ ಇಲ್ಲ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಸಂಪೂರ್ಣ ವಿಫಲಗೊಂಡಿದೆ. ಹಣವಿದ್ದವರಿಗೆ ಮಾತ್ರ ಪಕ್ಷದಲ್ಲಿ ಬೆಲೆ ಕೊಡುತ್ತಾರೆ. ಈ ಎಲ್ಲಾ ಕಾರಣಗಳಿಂದ ಬೇಸತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದರು.

ಮಲೆನಾಡು ರೈತ ಹೋರಾಟ ಸಮಿತಿಯಿಂದ ನನ್ನ ಹೋರಾಟ ಆರಂಭವಾಗಿದೆ. ಮಲೆನಾಡು ಭಾಗದ ರೈತರಿಗಾಗಿಯೆ ನನ್ನ ಹೋರಾಟವನ್ನು ನಿರಂತರವಾಗಿ ಮುಂದುವರಿಸುತ್ತೇನೆ ಮತ್ತು ಹೋರಾಟ ಸಮಿತಿಯಿಂದಲೆ ಪಕ್ಷೇತರನಾಗಿ ಸಾಗರ ವಿಧಾನ ಸಭೆಗೆ ಸ್ಪರ್ಧಿಸುತ್ತೇನೆ. ಯಾವ ಪಕ್ಷಕ್ಕೂ ನಾನು ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
1986ರಲ್ಲಿ ನಾನು ಪುರಸಭೆ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತದಿಂದ ಗೆದ್ದುಬಂದೆ. ಕಾಗೋಡು ತಿಮ್ಮಪ್ಪನವರು ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದರು. ಅಂದಿನಿಂದ ಸುಮಾರು 38 ವರ್ಷಗಳ ಕಾಲ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪಕ್ಷದ ಏಳಿಗೆಗಾಗಿ ದುಡಿದೆ. ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದೆ. ಬಿಜೆಪಿಯ ವಿರುದ್ಧ ಪ್ರಬಲ ಹೋರಾಟ ನಡೆಸಿದೆ. ಕಾಗೋಡು ತಿಮ್ಮಪ್ಪನವರ ಜೊತೆ ಸೇರಿಕೊಂಡು ಅರಣ್ಯ ಕಾಯ್ದೆ ಸೇರಿದಂತೆ ರೈತರ ಸಮಸ್ಯೆಗಳಿಗಾಗಿ ಬಹುದೊಡ್ಡ ಹೋರಾಟವನ್ನೇ ಮಾಡಿದೆ. ಆದರೂ ಕೂಡ ಕಾಂಗ್ರೆಸ್ ನನ್ನನ್ನು ಕಡೆಗಣಿಸಿತು ಎಂದರು.

ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕಾಂಗ್ರೆಸ್ ಪಕ್ಷ ನೋಡುವುದು ಬರೀ ಹಣ ಮಾತ್ರ. ನಿಮ್ಮ ಬಳಿ ಎಷ್ಟು ಕೋಟಿ ಇದೆ ಎಂದು ಕೇಳುತ್ತಾರೆಯೇ ಹೊರತು ಎಷ್ಟು ಜನ ಇದ್ದಾರೆ ಎಂದು ಕೇಳುವುದಿಲ್ಲ. ಗಂಟು ನೋಡುತ್ತಾರೆಯೇ ವಿನಃ ನಂಟು ನೋಡುವುದಿಲ್ಲ. ಹಣದ ಜಾತ್ರೆ ಮಾಡಿ ಚುನಾವಣೆಯ ಹಬ್ಬ ಮಾಡಲು ಕಾಂಗ್ರೆಸ್ಸಿಗರು ಹೊರಟಿದ್ದಾರೆ. ಬೇರೆ ಬೇರೆ ಪಕ್ಷದಿಂದ ಬಂದವರಿಗೆ ಮೂರು ಮೂರು ಹುದ್ದೆ ನೀಡುತ್ತಾರೆ. ವಕ್ತಾರನ ಹುದ್ದೆ ಕೊಡುತ್ತಾರೆ. ನಿಜವಾದ ಕಾರ್ಯಕರ್ತರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.

ಇನ್ನು ನನ್ನ ಹೋರಾಟ ರೈತರ ಪರವಾಗಿಯೇ ಇರುತ್ತದೆ. ಚುನಾವಣೆಗೆ ಸ್ಮತಂತ್ರವಾಗಿ ಸ್ಪರ್ಧಿಸುತ್ತೇನೆ. ಸಾಗರದ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮುನ್ನವೇ ಚುನಾವಣೆಗೆ ನಿಂತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ್ದೆ. ಒಬ್ಬ ಹೋರಾಟಗಾರನ ಹಿಂದೆ ಜನರು ಇದ್ದೇ ಇರುತ್ತಾರೆ. ಅವರ ಪ್ರೀತಿ ವಿಶ್ವಾಸ ನನ್ನ ಮೇಲಿದೆ. ರಾಜಕಾರಣ ಮತ್ತು ಹೋರಾಟ ಈ ಎರಡನ್ನು ಜೊತೆಜೊತೆಯಾಗಿಯೆ ತೆಗೆದುಕೊಂಡು ಹೋಗುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಮೂರ್ತಿ, ಸುಭಾಷ್ ಇದ್ದರು.
ಮಾ.11, 12 ಅಹೋರಾತ್ರಿ ಗಮಕ ಕಾರ್ಯಕ್ರಮ
ಗಮಕ ಕಲಾ ಪರಿಷತ್ ವತಿಯಿಂದ ಪದ್ಮಶ್ರೀ ಪ್ರಶಸ್ತಿ, ಪ್ರಥಮ ಕುಮಾರವ್ಯಾಸ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಮಕ ಗಂಧರ್ವ ಹೆಚ್.ಆರ್.ಕೇಶವಮೂರ್ತಿ ರವರ ಸ್ಮರಣಾರ್ಥವಾಗಿ ಮಾ.11 ಮತ್ತು 12 ರಂದು ಹೊಸಹಳ್ಳಿಯ ಗಮಕ ಭವನದಲ್ಲಿ 6ನೇ ಅಹೋರಾತ್ರಿ ಗಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ನ ಕಾರ್ಯದರ್ಶಿ ಎಸ್.ನಾಗರಾಜ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮ ಪರಿಷತ್ನ ವಿಶಿಷ್ಟ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಇಂತಹ ಅಹೋರಾತ್ರಿ ಗಮಕ ಕಾರ್ಯಕ್ರಮವನ್ನು ಪರಿಷತ್ ಈವರೆಗೆ 5 ಬಾರಿ ನಡೆಸಿದೆ ಎಂದರು.

ಈ ಕಾರ್ಯಕ್ರಮದಲ್ಲಿ 25 ಗಂಟೆಗಳ ಕಾಲ ತಡೆ ರಹಿತ ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮ ನಡೆಯಲಿದೆ. ಗದುಗಿನ ಕುಮಾರವ್ಯಾಸ ಭಾರತದ ಆಯ್ದ ಕಥಾ ಭಾಗಗಳನ್ನು ನಾಡಿನ ವಿವಿಧೆಡೆಗಳಿಂದ ಆಗಮಿಸುವ 20 ವಾಚನ-ವ್ಯಾಖ್ಯಾನ ಜೋಡಿ ಕಲಾವಿದರು ನಡೆಸಿಕೊಡಲಿದ್ದಾರೆ ಎಂದರು.

 ನಾಡಿನ ಇನ್ನೆಲ್ಲೂ ಇಂತಹ ಅಹೋರಾತ್ರಿ ಕಾರ್ಯಕ್ರಮ ಈವರೆಗೆ ನಡೆದಿಲ್ಲ. ಗಮಕ ಗ್ರಾಮ ಎಂದೇ ಖ್ಯಾತಿಯಾಗಿರುವ ಹೊಸಹಳ್ಳಿ ತನ್ನ ಹೆಸರಿಗೆ ತಕ್ಕಂತೆ ಗಮಕ ಕಲೆಯ ಇಂತಹ ವಿಶಿಷ್ಟ ಕಾರ್ಯಕ್ರಮವನ್ನು 6ನೇ ಬಾರಿಗೆ ನಡೆಸುತ್ತಿದೆ ಎಂದರು.

 ಮಾ.11 ರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಸಾಹಿತಿ ಹಾಗೂ ಪ್ರವಚನಕಾರ ಶಾಂತ ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಪರಿಷತ್ನ ಅಧ್ಯಕ್ಷ ಹೆಚ್.ಎಸ್.ಸತ್ಯನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

 ಮಾ.12ರ ಮಧ್ಯಾಹ್ನ 12.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಪರಿಷತ್ನ ಗೌರವಾಧ್ಯಕ್ಷ ಟಿ.ಆರ್.ಅಶ್ವಥ್ನಾರಾಯಣ ಶೆಟ್ಟಿ, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣಶೆಟ್ಟಿ, ಹಾಗೂ ಇದೇ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ನಾರಾಯಣರಾವ್ ಆಗಮಿಸಲಿದ್ದು, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಸಮಾರೋಪ ನುಡಿಗಳನ್ನಾಡುವರು ಎಂದರು.

 ಈ ಕಾರ್ಯಕ್ರಮದಲ್ಲಿ ಡಾ.ಹೆಚ್. ಶಾಂತಾರಾಮ್ ಗಮಕ ಪ್ರಶಸ್ತಿಯನ್ನು ಚಿತ್ರದುರ್ಗದ ಗಮಕಿ ಚಂಪಕಾ ಶ್ರೀಧರ್ ಹಾಗೂ ಸಾಗರದ ಹಿರಿಯ ವ್ಯಾಖ್ಯಾನಕಾರ ಕೆ.ಆರ್.ಕೃಷ್ಣಯ್ಯ ಅವರಿಗೆ ನೀಡಿ ಗೌರವಿಸಲಾಗುವುದು ಎಂದರು.

 ಪತ್ರಿಕಾಗೋಷ್ಟಿಯಲ್ಲಿ ಪರಿಷತ್ನ ಖಜಾಂಚಿ ಹೆಚ್.ಕೆ.ಕೇಶವಮೂರ್ತಿ, ಮಾರ್ಗದರ್ಶಕರಾದ ಹೆಚ್.ಎಸ್.ಗೋಪಾಲ, ರಾಜಾರಾಮಮೂರ್ತಿ ಉಪಸ್ಥಿತರಿದ್ದರು.
ಮಾ. 10-12ರವರೆಗೆ ಆರ್‌ಪಿಎಂ ಆಟೋಮೋಟಿವ್ ಶೋ
ಬೆಂಗಳೂರಿನ ಖ್ಯಾತ ಆಟೋ ಎಕ್ಸ್ಪೋ ಆಯೋಜಕರಾದ ಆರ್ಪಿಎಂ ಕಂಪನಿಯಿಂದ ಮಾ.10, 11 ಹಾಗೂ 12 ರಂದು ಶಿವಮೊಗ್ಗದ ಹಳೆ ಜೈಲ್ ಆವರಣದ ಫ್ರೀಡಂ ಪಾರ್ಕ್ ನಲ್ಲಿ ಆರ್‌ಪಿಎಂ ಆಟೋಮೋಟಿವ್ ಶೋ ಹಮ್ಮಿಕೊಳ್ಳಲಾಗಿದೆ ಎಂದು ಕಂಪನಿಯ ಎಂಡಿ ಶ್ರೀನಾಥ್ ತಿಳಿಸಿದರು.

 ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಮ್ಮ ಕಂಪನಿಯಿಂದ ಶಿವಮೊಗ್ಗದಲ್ಲಿ 2014 ಮತ್ತು 2017ರಲ್ಲಿ ಆಟೋಮೋಟಿವ್ ಶೋ ಆಯೋಜಿಸಿ ಅಭೂತಪೂರ್ವ ಯಶಸ್ವಿಯ ಬಳಿಕ ಈಗ 3ನೇ ಬಾರಿ ಆಯೋಜಿಸಲಾಗುತ್ತಿದೆ ಎಂದರು.

ಈ ಶೋನಲ್ಲಿ ಪ್ರಸಿದ್ಧ ಕಂಪನಿಗಳ ಕಾರು ಹಾಗೂ ಬೈಕ್ಗಳ ಪ್ರದರ್ಶನ ಹಾಗೂ ಮಾರಾಟವಿದ್ದು, ಲಕ್ಸುರಿ ಕಾರ್ಗಳಾದ ಮರ್ಸಿಡಿಸ್ ಬೆಂಜ್ಸ್, ಬಿಎಂಡಬ್ಲ್ಯೂ, ಆಡಿ, ಜಾಗ್ವಾರ್, ರೇಂಜ್ ರೋವರ್, ಎಂ.ಜಿ.ಹೆಕ್ಟಾರ್, ಟೊಯೋಟಾ, ಮಾರುತಿ ಸುಜುಕಿ, ಸ್ಕೋಡಾ ನೆಕ್ಸಾ, ಟಾಟಾ ಕಾರ್ಗಳ ಮತ್ತು ಸೂಪರ್ ಬೈಕ್ಗಳಾದ ಟ್ರೈಯುಂಫ್, ಬೆನೆಲಿ, ಕೆ.ಟಿ.ಎಂ. ಯಮಹಾ, ಏತರ್ ಮತ್ತು ವಿನೂತನ ಮತ್ತು ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಲ್ಲಾ ವೈವಿಧ್ಯ ಎಲೆಕ್ಟಿçಕ್ ಕಾರ್ ಹಾಗೂ ಬೈಕ್ಗಳನ್ನು ನೋಡಬಹುದಾಗಿದೆ ಎಂದರು.

ಇದರ ಜೊತೆಯಲ್ಲಿ ಮೈನವಿರೇಳಿಸುವ ಸ್ಟಂಟ್ ಬೈಕಿಂಗ್ ಕೂಡ ಇದ್ದು, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಏರ್ಪಡಿಸಿರುವ ಲೈಫ್ಸ್ಟೈಲ್ ಎಕ್ಸಿಬಿಷನ್ ನಲ್ಲಿ ಸೀರೆ, ಕುರ್ತಿ, ಬೆಳ್ಳಿ ಮತ್ತು ಇಮಿಟೇಷನ್ ಆಭರಣ, ಬ್ಯಾಗ್ಗಳು ದೊರೆಯಲಿದ್ದು, ವಿಧ ವಿಧವಾದ ತಿನಿಸುಗಳನ್ನು ಸವಿಯುವ ಅವಕಾಶವಿದೆ. ಶಾಖಾಹಾರ, ಮಾಂಸಾಹಾರ, ಚಾಟ್ಸ್, ಐಸ್ಕ್ರೀಂ, ಜ್ಯೂಸ್ ಲಭ್ಯವಿದೆ. ಪ್ರವೇಶ ಶುಲ್ಕ 50 ರೂ.ಇದ್ದು, ಟಿಕೇಟ್ನ್ನು ಅಲ್ಲೇ ಕೌಂಟರ್ನಲ್ಲಿ ತೆಗೆದುಕೊಳ್ಳಬಹುದಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕಂಪನಿಯ ಎಂಡಿ ಆದಿಲ್ ಅಹಮದ್ ಉಪಸ್ಥಿತರಿದ್ದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದ ತನಿಖೆ ಸಿಬಿಐಗೆ ವಹಿಸಿ: ಕಿರಣ್ ಒತ್ತಾಯ
ಶಿವಮೊಗ್ಗ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಕ್ರಮ ಲಂಚ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಜನರಿಗೆ ಕಾನೂನಿನ ಬಗ್ಗೆ ಇರುವ ಗೌರವವನ್ನು ಕಾಪಾಡಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಕಿರಣ್ ಒತ್ತಾಯಿಸಿದರು.

 ಅವರು ಇಂದು ಮೀಡಿಯಾ ಹೌಸ್ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಶಾಸಕರೊಬ್ಬರ ಮನೆಯಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕ ನಂತರವೂ ಕಾನೂನು ಕ್ರಮ ಜರುಗಿಸಲು ಆಗದೆ ನಿಸ್ಸಹಾಯಕರಾಗಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

 ರಾಜ್ಯದ ಚುನಾವಣೆ ಹೊತ್ತಿನಲ್ಲಿರುವಾಗಲೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಮಗ ಗುತ್ತಿಗೆದಾರರೊಬ್ಬರಿಂದ ಕಂತೆ ಕಂತೆ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ದಾಳಿಯ ಸಂದರ್ಭದಲ್ಲಿ ಸಿಕ್ಕ ಹಣ ಕಂಡು ಜನ ಸಾಮಾನ್ಯರು ಬೆಚ್ಚಿ ಬಿದ್ದಿದ್ದಾರೆ ಎಂದ ಅವರು, ಚುನಾವಣೆ ಸಂದರ್ಭದಲ್ಲಿ ಅಕ್ರಮ ಹಣ ಸಂಗ್ರಹದಲ್ಲಿ ತೊಡಗಿರುವ ರಾಜ್ಯದ ಎಲ್ಲಾ ಶಾಸಕರು ಹಾಗೂ ಮಂತ್ರಿಗಳ ಮನೆ ಹಾಗೂ ಕಚೇರಿಯನ್ನು ತಪಾಸಣೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

 ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಬಿ.ಆರ್.ಮನೋಹರಗೌಡ, ಹರೀಶ್, ಲಿಂಗರಾಜು, ಶಿವಕುಮಾರ್ಗೌಡ, ನಜೀರ್ ಅಹಮದ್ ಇನ್ನಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: KannadaNewsKannadaNewsLiveKannadaNewsOnline ShivamoggaKannadaNewsWebsiteKannadaWebsiteLatestNewsKannadaLocalNewsMalnadNewsNewsinKannadaNewsKannadaShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರಾಜ್ಯದಲ್ಲಿ ಬಿಸಿಲ ಬೇಗೆ ಏರಿಕೆ: ಮಂಗಳೂರಿನಲ್ಲಿ ಗರಿಷ್ಠ ತಾಪಮಾನ ದಾಖಲು

Next Post

ಅಯ್ಯೋ ದೇವರೇ! ಹೊತ್ತಿ ಉರಿದ ಬಿಎಂಟಿಸಿ ಬಸ್: ಕಂಡಕ್ಟರ್ ಸಜೀವ ದಹನ

kalpa News

kalpa News

Next Post
ಅಯ್ಯೋ ದೇವರೇ! ಹೊತ್ತಿ ಉರಿದ ಬಿಎಂಟಿಸಿ ಬಸ್: ಕಂಡಕ್ಟರ್ ಸಜೀವ ದಹನ

ಅಯ್ಯೋ ದೇವರೇ! ಹೊತ್ತಿ ಉರಿದ ಬಿಎಂಟಿಸಿ ಬಸ್: ಕಂಡಕ್ಟರ್ ಸಜೀವ ದಹನ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL