ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಿಂದ ಮೈಸೂರಿಗೆ ಹೊರಡಲು ಬಸ್ ಹತ್ತುತ್ತಿದ್ದ ವೃದ್ದೆಯೊಬ್ಬರ 40 ಗ್ರಾಂ ತೂಕದ ಚಿನ್ನದ ಸರವನ್ನು ಅಪಹರಿಸಿರುವ ಘಟನೆ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮೈಸೂರಿನಲ್ಲಿರುವ ತಮ್ಮ ಮಗಳ ಮನೆಗೆ ತೆರಳಲು 63 ವರ್ಷದ ವೃದ್ದೆ ಶಿವಮೊಗ್ಗದಿಂದ ಬಸ್’ನಲ್ಲಿ ಹೊರಟಿದ್ದರು. ಈಕೆ ಬಸ್ ಹತ್ತಲು ನಿಲ್ದಾಣಕ್ಕೆ ಬಂದಾಗ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದಾರೆ.
ಭಾರೀ ಜನದಟ್ಟಣೆಯಿದ್ದ ಬಸ್’ನಲ್ಲಿ ಹತ್ತಿ ಸೀಟು ಹಿಡಿಯಲು ವೃದ್ದೆ ಯತ್ನಿಸುತ್ತಿದ್ದರು. ಈ ಜನದಟ್ಟಣೆಯ ನಡುವೆ ಆಕೆಯ ಕುತ್ತಿಗೆಯಲ್ಲಿದ್ದ ಅಂದಾಜು 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಅಪಹರಿಸಲಾಗಿದೆ.
ವೃದ್ದೆಗೆ ಸೀಟು ದೊರೆತು, ಕುಳಿತ ನಂತರ ಶಾಲು ಹೊದೆಯುವ ವೇಳೆ ಮಾಂಗಲ್ಯ ಸರ ಕಳ್ಳತನವಾಗಿರುವುದು ಆಕೆಗೆ ತಿಳಿದಿದೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post