ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಅಂಬೆಗಾಲು ಸಂಸ್ಥೆಯಿಂದ ಏರ್ಪಡಿಸಲಾಗಿದ್ದ ಕಿರುಚಿತ್ರ ಅವಾರ್ಡ್ ಸ್ಪರ್ಧೆಯಲ್ಲಿ ಹದಿನೈದು ಚಿತ್ರಗಳು ಆಯ್ಕೆಯಾಗಿ ಸ್ಕ್ರೀನಿಂಗ್ ಮಾಡಿ ತೀರ್ಪುದಾರರ ಆಯ್ಕೆಯಂತೆ “ಬಿಡುಗಡೆ” ಕಿರುಚಿತ್ರಕ್ಕೆ ಶ್ರೇಷ್ಟ ಚಿತ್ರವೆಂದು ಪರಿಗಣಿಸಿ ಎರಡನೆಯ ಬಹುಮಾನವನ್ನು ಘೋಷಿಸಲಾಯಿತು.
ಬಹುಮಾನದಲ್ಲಿ ಹದಿನೈದು ಸಾವಿರ ನಗದು ಹಾಗೂ ಪಾರಿತೋಷಕ ಒಳಗೊಂಡಿತ್ತು, ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ ಶಿವಮೊಗ್ಗದ ಪೊಲೀಸ್ ಅಧಿಕಾರಿ ಹಾಗೂ ಚಿತ್ರದ ನಿರ್ಮಾಪಕ ಮಾಲ್ಗುಡಿ ದಾನಂ ರವರಿಗೆ ಶ್ರೇಷ್ಟ ನಟ ಬಹುಮಾನವನ್ನು ಅಂಬೆಗಾಲು ಸಂಸ್ಥೆಯ ಅಧ್ಯಕ್ಷರಾದ ಡಿ.ಎಸ್ ಅರುಣ್ ಮತ್ತು ತಂಡ ನೀಡಿತು, ಈ ಚಿತ್ರದಲ್ಲಿನ ಸಂದೇಶ, ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಹಾಗೂ ವಿವಿಧ ಪಾತ್ರಗಳ ಕುರಿತಾಗಿ ಪ್ರಶಂಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















