ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ಶಿವಮೊಗ್ಗ ನಗರ ಇದರ ವತಿಯಿಂದ ಶ್ರೀ ಶನೈಶ್ಚರ ಸ್ವಾಮಿಯ ಜಯಂತಿ ಅಂಗವಾಗಿ ವಿನೋಬನಗರ ಶನೈಶ್ಚರ ದೇವಸ್ಥಾನ ನಗರದ ಶುಭ ಮಂಗಳ ಸಮುದಾಯ ಭವನ ಪಕ್ಕದ ಶ್ರೀ ಶನೈಶ್ಚರ ದೇವಾಲಯದಲ್ಲಿ ಮಹಾರಥೋತ್ಸವವನ್ನು ಏರ್ಪಡಿಸಲಾಗಿತ್ತು.
ರಥೋತ್ಸವದಲ್ಲಿ ಭಾಗವಹಿಸಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ KSEshwarappa ಮಾತನಾಡಿ, ಈ ದೇವಾಲಯ ಆರಂಭವಾಗಿ 14 ವರ್ಷಗಳಾಗಿವೆ. ಭಕ್ತರ ಸಂಖ್ಯೆಯೂ ಹೆಚ್ಚಿದೆ. ರಥೋತ್ಸವ ಆರಂಭವಾಗಿ ನಾಲ್ಕು ವರ್ಷಗಳಾಗಿವೆ. ಪ್ರತಿ ವರ್ಷ ಸಾವಿರಾರು ಜನರು ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಬಂದ ಭಕ್ತರಿಗೆಲ್ಲರಿಗೂ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ಇಲ್ಲಿ ಬಂದ ಭಕ್ತರಿಗೆ ಯಾವಾಗಲೂ ಒಳ್ಳೆಯದಾಗುತ್ತದೆ ಎಂದರು.

Also read: ಇತಿಹಾಸದ ಹೆಜ್ಜೆ ಗುರುತುಗಳನ್ನು ಹಿಡಿದಿಟ್ಟುಕೊಳ್ಳುವುದು ವಸ್ತು ಸಂಗ್ರಹಾಲಯಗಳ ಕೆಲಸ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post