ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿನೋಬನಗರ 60 ಅಡಿ ರಸ್ತೆಯ ಶ್ರೀ ಶನೈಶ್ವರ ಸ್ವಾಮಿ ದೇವಾಲಯದಲ್ಲಿ ದೇವಳ ಟ್ರಸ್ಟ್ ಹಾಗೂ ಅರ್ಚಕ ವೃಂದದ ವತಿಯಿಂದ ಜು.4ರಿಂದ 9ರವರೆಗೆ ಶ್ರೀ ಯಜುಃ ಸಂಹಿತಾ ಯಾಗ, ಶ್ರೀ ವೇದ ನಾರಾಯಣ ಅನುಗ್ರಹ ಪ್ರಶಸ್ತಿ ಪ್ರದಾನ ಮತ್ತು ಧಾರ್ಮಿಕ ಉಪನ್ಯಾಸ ಜರುಗಲಿದೆ.
ಜುಲೈ 9ರ ಶನಿವಾರ ಬೆಳಿಗ್ಗೆ 10 ಗ೦ಟೆಗೆ ಹರಿಹರಪುರ ಮಠದ ಪೂಜ್ಯಶ್ರೀ ಶಂಕರಾಚಾರ್ಯ ಶ್ರೀ ಸ್ವಯಂ ಪ್ರಕಾಶ ಸರಸ್ವತಿ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಯಜುಃ ಸಂಹಿತಾ ಯಾಗದ ಮಹಾ ಪೂರ್ಣಾಹುತಿ ಹಾಗೂ ಶಿವಮೊಗ್ಗ ರವೀಂದ್ರನಗರದ ಶ್ರೀ ಪ್ರಸನ್ನಗಣಪತಿ ದೇವಾಲಯದ ಪ್ರಧಾನ ಅರ್ಚಕರಾದ ವೇ.ಬ್ರ. ಅ.ಪ. ರಾಮಭಟ್ಟ ಅವರಿಗೆ ಶ್ರೀವೇದ ನಾರಾಯಣಾನುಗ್ರಹ ಪ್ರಶಸ್ತಿ ಪ್ರದಾನ ಹಾಗೂ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಇರುತ್ತದೆ.

ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ ಭಾಗವತ್, ವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎ.ಜೆ.ರಾಮಚಂದ್ರ, ಮಲೆನಾಡು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಪದನಾಭ ಭಟ್, ಹೆಚ್.ಎಸ್. ದೇವಾಲಯ ಸಮಿತಿ ಉಪಾಧ್ಯಕ್ಷ ವಿ. ರಾಜು, ಕಾರ್ಯದರ್ಶಿ ಸ.ನ. ಮೂರ್ತಿ, ದೇವಳದ ಪ್ರಧಾನ ಅರ್ಚಕ ವಿನಾಯಕ ಬಾಯರಿ, ಭಜನಾ ಪರಿಷತ್ ಅಧ್ಯಕ್ಷ ಶಬರೀಶ್ ಕಣ್ಣನ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಅ.ಪ. ರಾಮಭಟ್ಟರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ನಿಜಕ್ಕೂ ಸಂತಸದ ಸುದ್ಧಿ ಎಂದರು.
ಅಂದಿನ ಕಾರ್ಯಕ್ರಮದಲ್ಲಿ ಶಿವಮೊಗ್ಗೆಯ ಜನತೆ ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಾಮಭಟ್ಟರನ್ನು ಪ್ರೀತಿಯಿಂದ ಅಭಿನಂದಿಸಲು ವಿನಂತಿಸಿದರು.










Discussion about this post