ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಹೆಲ್ತ್ ಕೇರ್ ಎಂಪ್ಲಾಯಿಸ್ ಅಸೋಸಿಯೇಶನ್ ವತಿಯಿಂದ ವೈದ್ಯರಿಗೆ ಹಾಗೂ ವೈದ್ಯಕೀಯೇತರ ಆಸ್ಪತ್ರೆ ಸಿಬ್ಬಂದಿಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಶಿಯಾ ಕಲ್ಚರಲ್ ಫೆಸ್ಟ್ 2022ರ ಅಡಿಯಲ್ಲಿ ಕಾರ್ಯಕ್ರಮಗಳು ಅ.30 ನಾಳೆ ಸಂಜೆ ಕುವೆಂಪು ರಂಗಮAದಿರದಲ್ಲಿ ನಡೆಯಲಿದ್ದು, ಅಲ್ಲಿಯೇ ಸ್ಪರ್ಧೆಗಳು ನಡೆಯಲಿವೆ.
ವೈದ್ಯರಿಗಾಗಿ ಗಾಯನ ಸ್ಪರ್ಧೆ ನಡೆಯಲಿದ್ದು, ಇದಕ್ಕೆ ಪ್ರವೇಶ ಶುಲ್ಕವಿರುತ್ತದೆ. ವಿಜೇಯ ವೈದ್ಯರಿಗೆ ಶಿಯಾ ಸಿಂಗರ್ ಡಾಕ್ಟರ್ ಆಫ್ ದಿ ಇಯರ್ ಗೌರವ ನೀಡಲಾಗುತ್ತದೆ.
Also read: ಜೆಡಿಎಸ್’ಗೆ ಮಾತ್ರ ಮತ ಹಾಕಬೇಡಿ: ಹೀಗೆಂದು ಸಿದ್ಧರಾಮಯ್ಯ ಹೇಳಿದ್ದೇಕೆ?
ಇನ್ನು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳೂ ಸಹ ನಡೆಯಲಿದ್ದು, ನಗರದ ಆಸ್ಪತ್ರೆ ಸಿಬ್ಬಂದಿಗಳ ತಂಡವು ಪಾಲ್ಗೊಳ್ಳಬಹುದಾಗಿದೆ. ಇದಕ್ಕೂ ಸಹ ಪ್ರವೇಶ ಶುಲ್ಕ ಪಾವತಿಸಿ, ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಎಸ್. ಈಶ್ವರಪ್ಪ, ಎಂಎಲ್’ಸಿ ಡಿ.ಎಸ್. ಅರುಣ್, ಆಯನೂರು ಮಂಜುನಾಥ್, ಡಿಎಚ್’ಒ ಡಾ.ರಾಜೇಶ್ ಸುರಗೀಹಳ್ಳಿ, ಡಾ. ಧನಂಜಯ ಸರ್ಜಿ, ಡಾ.ಟಿ.ಎಸ್. ತೇಜಸ್ವಿ, ಡಾ.ಎಸ್. ನಾಗೇಂದ್ರ, ಡಾ.ಡಿ.ಬಿ. ಅವಿನಾಶ್, ಡಾ.ಎಸ್.ಐ. ಬೀರಾದಾರ್, ನಾರಾಯಣ ಹೃದಯಾಲಯದ ವರ್ಗೀಸ್ ಪಿ ಜಾನ್, ಡಾ.ವಿಕ್ರಂ ಬೆನ್ನೂರ್, ಎಸ್.ವಿ. ರಾಜಾ ಸಿಂಗ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ಮಾಹಿತಿಗಾಗಿ ಮೊ: ಹರೀಶ್ ಪಂಡಿತ್ (9886422078) ಹಾಗೂ ಸಚಿನ್ ನಾಯ್ಕ್ (9980774757)ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post